Advertisement

ಮನಿ Money ಕಥೆ

04:53 AM Jul 06, 2020 | Lakshmi GovindaRaj |

ಊರಿನಲ್ಲಿರುವ ಹೆತ್ತವರು ಆರ್ಥಿಕವಾಗಿ ಸಬಲರಾಗಿರಬೇಕು ಎನ್ನುವ ಆಶಯ ಎಲ್ಲಾ ಮಕ್ಕಳದೂ ಆಗಿರುತ್ತದೆ. ಅದಕ್ಕಾಗಿ ಏನೇನು ಮಾಡಬಹುದು?

Advertisement

ನಮ್ಮಲ್ಲನೇಕರು ಲಾಕ್‌ಡೌನ್‌ ಘೋಷಣೆಯಾದ ನಂತರ ಕೆಲಸ ಮಾಡುತ್ತಿದ್ದ ಊರನ್ನು ತೊರೆದು ಸ್ವಂತ ಊರಿಗೆ ತೆರಳಿದ್ದರು. ಊರಿಗೆ ತೆರಳದೆ ತಾವಿದ್ದಲ್ಲಿಯೇ ಉಳಿದವರು ಹಲವರು. ನಾವೆಲ್ಲೇ ಇದ್ದರೂ ನಮ್ಮ ಗಮನ, ಕಾಳಜಿ ಹೆತ್ತವರ  ಬಗ್ಗೆ ಇದ್ದೇ ಇರುತ್ತದೆ. ಊರಿನಲ್ಲಿರುವ ಹೆತ್ತವರು ಆರ್ಥಿಕವಾಗಿ ಸಬಲರಾಗಿರಬೇಕು ಎನ್ನುವ ಆಶಯ ಎಲ್ಲಾ ಮಕ್ಕಳದೂ ಆಗಿರುತ್ತದೆ. ಅದಕ್ಕಾಗಿ ಏನೇನು ಮಾಡಬಹುದು ಗೊತ್ತೆ?

ಕ್ಯಾಷ್‌ಲೆಸ್‌ ಪೇಮೆಂಟ್‌: ಪೇಟಿಎಂ, ಫೋನ್‌ ಪೇನಂಥ ಇ ವ್ಯಾಲೆಟ್‌ಗಳು, ಡೆಬಿಟ್‌ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್‌- ಇವೆಲ್ಲಾ ಡಿಜಿಟಲ್‌ ವ್ಯವಹಾರಗಳು ಇನ್ನುಮುಂದೆ ಸಾಮಾನ್ಯ ಎನ್ನುವಂತಾಗಲಿದೆ. ಹಿರಿಯರಿಗೆ, ವಯಸ್ಸಾದವರಿಗೆ  ಡಿಜಿಟಲ್‌ ತಂತ್ರಜ್ಞಾನದ ಬಳಕೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. ಹೀಗಾಗಿ ಅವರಿಗೆ ಹಣಕಾಸು ಪೇಮೆಂಟ್‌ ಮಾಡಲು ತರಬೇತಿ ನೀಡಬೇಕು. ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಗಳ ಕುರಿತು ಅವರಿಗೆ ತಿಳಿವಳಿಕೆ  ಮೂಡಿಸಬೇಕು.

ಆರೋಗ್ಯ ವಿಮೆ: ಸಾಂಕ್ರಾಮಿಕ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ, ಆರೋಗ್ಯದ ಚಿಂತೆ ಮೂಡುವುದು ಸಹಜ. ನಾಳೆ ಹೇಗೋ ಏನೋ ಎಂಬುದನ್ನು ಬಲ್ಲವರಿಲ್ಲ. ಈ ಸಂದರ್ಭದಲ್ಲಿ ಹೆತ್ತವರಿಗೆ ಆರೋಗ್ಯ ವಿಮೆ ಮಾಡಿಸುವುದು  ಸೂಕ್ತ. ಕ್ಯಾಶ್‌ಲೆಸ್‌ ಆರೋಗ್ಯ ವಿಮೆಯನ್ನೇ ಆರಿಸಿಕೊಳ್ಳುವುದು ಉತ್ತಮ. ಎಮರ್ಜೆನ್ಸಿ ಮತ್ತು ಎಮರ್ಜೆನ್ಸಿ ಅಲ್ಲದ ಮೆಡಿಕಲ್‌ ಖರ್ಚುಗಳನ್ನು ಕವರ್‌ ಮಾಡುವ ವಿಮೆಯನ್ನೇ ಆರಿಸಿಕೊಂಡರೆ ಇನ್ನೂ ಒಳ್ಳೆಯದು.

ಆಡ್‌ ಆನ್‌ ಕಾರ್ಡ್‌: ಪೋಷಕರ ಬ್ಯಾಂಕ್‌ ಖಾತೆಗಳಿಗೆ ಪದೇಪದೆ ಹಣ ಹಾಕುವುದು ತ್ರಾಸದಾಯಕ ಎನಿಸಿದಲ್ಲಿ, ಈಗಾಗಲೇ ಕ್ರೆಡಿಟ್‌ ಕಾರ್ಡ್‌ ಹೊಂದಿದ್ದವರು ಆಡ್‌ ಆನ್‌ ಕಾರ್ಡುಗಳನ್ನು ಒದಗಿಸುವಂತೆ ಬ್ಯಾಂಕ್‌,  ಹಣಕಾಸು  ಸಂಸ್ಥೆಗಳನ್ನು ವಿನಂತಿಸಿಕೊಳ್ಳ ಬಹುದು. ಆಡ್‌ ಆನ್‌ ಕಾರ್ಡ್‌ ಎನ್ನುವುದು, ಕ್ರೆಡಿಟ್‌ ಕಾರ್ಡ್‌ದಾರನ ಕುಟುಂಬಸ್ಥರಿಗೆ ನೀಡುವ ಕಾರ್ಡ್‌ ಆಗಿದೆ. ಅದು ಕೂಡಾ ಕ್ರೆಡಿಟ್‌ ಕಾರ್ಡ್‌ ಮಾದರಿ ಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. ಆಡ್‌ ಆನ್‌ ಕಾರ್ಡುಗಳು, ಅದರ ಮೂಲ ಕ್ರೆಡಿಟ್‌ ಕಾರ್ಡ್‌ಗೆ ಲಿಂಕ್‌ ಆಗಿರುತ್ತವೆ.

Advertisement

ಕೈಗೆ ನೇರ ಕ್ಯಾಶ್‌: ಎಸ್‌ಬಿಐ, ಎಚ್‌ಡಿಎಫ್ಸಿ, ಕೋಟಕ್‌ ಮಹಿಂದ್ರಾ, ಆಕ್ಸಿಸ್‌ ಮುಂತಾದ ಬ್ಯಾಂಕುಗಳು ತಮ್ಮ ಗ್ರಾಹಕರ ಕೈಗೇ ಕ್ಯಾಶ್‌ ತಲುಪಿಸುವ ವ್ಯವಸ್ಥೆ ರೂಪಿಸಿವೆ. ಡೋರ್‌ ಸ್ಟೆಪ್‌ ಬ್ಯಾಂಕಿಂಗ್‌ ಸವಲತ್ತಿನಡಿ ಈ ವ್ಯವಸ್ಥೆಯನ್ನು  ಒದಗಿಸುತ್ತಿವೆ. ಈ ಸವಲತ್ತು ಒದಗಿಸಲು ಕನಿಷ್ಠ ಶುಲ್ಕವನ್ನು ವಿಧಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next