Advertisement
ಇರ್ಫಾನ್ ಪಠಾಣ್ ಜನಿಸಿದ್ದು 1984ರ ಅಕ್ಟೋಬರ್ 27ರಂದು. ಗುಜರಾತ್ ರಾಜ್ಯದ ಬರೋಡದಲ್ಲಿ. ( ಈಗಿನ ವಡೋದರಾ) ಸಹೋದರ ಖ್ಯಾತ ಕ್ರಿಕೆಟಿಗ ಯೂಸುಫ್ ಪಠಾಣ್. ಬರೋಡಾದ ಮಸೀದಿಯೊಂದರಲ್ಲಿ ಇವರ ತಂದೆ ಮೌಲ್ವಯಾಗಿದ್ದರು. ಹೀಗಾಗಿ ಪಠಾಣ್ ಸಹೋದರ ಬಾಲ್ಯ ಮಸೀದಿಯಲ್ಲೇ ಕಳೆದಿತ್ತು.
Related Articles
Advertisement
2003ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ ಟೆಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಮುಂದಿನ ವರ್ಷವೇ ಏಕದಿನ ಪದಾರ್ಪಣೆ ಮಾಡಿದರು.
ಅದು 2006ರ ಪಾಕಿಸ್ಥಾನ ಟೆಸ್ಟ್ ಸರಣಿ. ಮೊದಲರೆಡು ಪಂದ್ಯಗಳು ನೀರಸ ಡ್ರಾನಲ್ಲಿ ಅಂತ್ಯವಾಗಿದ್ದವು. ಆದರೆ ಮೂರನೇ ಪಂದ್ಯಕ್ಕೆ ಕಿಚ್ಚು ಹಚ್ಚಿದ್ದು ಇರ್ಫಾನ್ ಪಠಾಣ್ ಹ್ಯಾಟ್ರಿಕ್. ಪಂದ್ಯದ ಮೊದಲ ಓವರ್ ನ ಕೊನೆಯ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು ಪಠಾಣ್ ದಾಖಲೆ ಬರೆದಿದ್ದರು. ಅದು ಕೂಡಾ ಪಾಕಿಸ್ಥಾನದ ದಿಗ್ಗಜ ಆಟಗಾರರಾದ ಸಲ್ಮಾನ್ ಭಟ್, ಯೂನಿಸ್ ಖಾನ್ ಮತ್ತು ಮೊಹಮ್ಮದ್ ಯೂಸುಫ್ ರ ವಿಕೆಟ್ ಪಡೆದಿದ್ದರು.
2007ರಲ್ಲಿ ನಡೆದ ಚೊಚ್ಚಲ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾದ ಚಾಂಪಿಯನ್ ಆಗುವಲ್ಲಿ ಪಠಾಣ್ ಕೊಡುಗೆ ಅಪಾರ. ಪಾಕಿಸ್ಥಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಪ್ರಮುಖ ಮೂರು ವಿಕೆಟ್ ಪಡೆದು ಪಾಕ್ ಬ್ಯಾಟಿಂಗ್ ಕುಸಿಯುವಂತೆ ಮಾಡಿದ್ದರು ಈ ಎಡಗೈ ಸ್ವಿಂಗ್ ಬೌಲರ್. ಈ ಸಾಧನೆಗೆ ಇರ್ಫಾನ್ ಪಠಾಣ್ ಗೆ ಪಂದ್ಯಶ್ರೇಷ್ಠ ಗೌರವವೂ ಸಿಕ್ಕಿತ್ತು.
ಲಂಕಾ ವಿರುದ್ಧ ದಿಲ್ಲಿ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ವೀರೇಂದ್ರ ಸೆಹವಾಗ್ ಗಾಯಾಳಾಗಿ ಹೊರಬಿದ್ದಾಗ ಅವರ ಸ್ಥಾನ ತುಂಬಿದ್ದು ಇದೇ ಇರ್ಫಾನ್. ಆ ಪಂದ್ಯದಲ್ಲಿ ಪಠಾಣ್ 93 ರನ್ ಗಳಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ತಮ್ಮ ಟೆಸ್ಟ್ ಜೀವನದ ಚೊಚ್ಚಲ ಮತ್ತು ಏಕೈಕ ಶತಕ ಬಾರಿಸಿದ್ದರು.