Advertisement
ಯೂಟ್ಯೂಬ್ ಮೂಲಕ ಮಿಂಚಿದವರು ಹಲವಾರು. ದಿನವೊಂದಕ್ಕೆ ನೂರಾರು ಹೊಸ ನಮೂನೆಯ ಚಾನೆಲ್ ಗಳು ಯೂಟ್ಯೂಬ್ ನಲ್ಲಿ ಹುಟ್ಟುತ್ತಲೇ ಇವೆ. ಯುವ ಜನರಲ್ಲಿ ತನ್ನ ಹಾಸ್ಯದ ವಿಶೇಷ ಅಭಿನಯದಿಂದ ಇಂದು ಮಿಲಿಯನ್ ಗಟ್ಟಲೇ ಚಂದಾದಾರರರನ್ನು ಹೊಂದಿರುವ ಯುವಕನೊಬ್ಬನ ಕಥೆಯಿದು.
Related Articles
Advertisement
ಭುವನ್ ಅದೊಂದು ದಿನ ತನ್ನ ಮೊಬೈಲ್ ನಲ್ಲಿ ಸೆಲ್ಫಿ ವಿಡಿಯೋ ತರಹದ ವಿಡಿಯೋ ಮಾಡಿ ಅದನ್ನು ‘BB Ki Vines’ ಎಂದು ನಾಮಾಕರಣ ಮಾಡಿದ ಯೂಟ್ಯೂಬ್ ಚಾನೆಲ್ ನಲ್ಲಿ ಆಪ್ಲೋಡ್ ಮಾಡುತ್ತಾರೆ. ಸತತವಾಗಿ ನಾಲ್ಕು ವಿಡಿಯೋ ಗಳನ್ನು ಆಪ್ಲೋಡ್ ಮಾಡುತ್ತಾರೆ. ಭುವನ್ ಸ್ನೇಹಿತರೆಲ್ಲಾ ಇದನ್ನು ನೋಡಿ ಸಮಯ ವ್ಯರ್ಥ ಮಾಡುತ್ತಿದ್ದೀಯಾ ಎಂದು ಹೇಳುತ್ತಾರೆ. ಆದರೆ ಭುವನ್ ಮಾತ್ರ ಅದು ಯಾವುದನ್ನು ತಲೆಗೆ ಹಾಕಿಕೊಳ್ಳದೆ ಸುಮ್ಮನೆ ಇರುತ್ತಾರೆ.
ಭುವನ್ ಮಾಡಿದ ವಿಡಿಯೋ ಗಳಲ್ಲಿ ಒಂದು ವಿಡಿಯೋ ಪಾಕಿಸ್ತಾನದ ಯಾವುದೋ ಒಂದು ವಿಶ್ವವಿದ್ಯಾಲಯದಲ್ಲಿ ವೈರಲ್ ಆಗುತ್ತದೆ. ಒಂದೇ ದಿನದಲ್ಲಿ 50 ಸಾವಿರ ವೀಕ್ಷಣೆ ಪಡೆದುಕೊಳ್ಳುತ್ತದೆ. ಇದು ಭುವನ್ ಅವರನ್ನು ನಿಧಾನವಾಗಿ ಜನಮನ್ನಣೆಗೆ ಬರುವಂತೆ ಮಾಡುತ್ತದೆ.
ನಿಧಾನವಾಗಿ ಭುವನ್ ಬಾಮ್ ಯೂಟ್ಯೂಬ್ ಚಾನೆಲ್ ನಲ್ಲಿ ಸಬ್ ಸ್ಕ್ರೈಬರ್ಸ್ ಬರಲು ಶುರು ಆಗುತ್ತದೆ.
ಭಾರತದಲ್ಲಿ ಮೊಬೈಲ್ ಮುಂದೆ ಇಟ್ಟು ಒಂಟಿಯಾಗಿ ಹಾಸ್ಯಾಸ್ಪದವಾಗಿ ವಿಚಾರಗಳನ್ನು ಹಂಚಿಕೊಳ್ಳುವ ಹೊಸ ಬಗೆಯ ಪ್ರಯೋಗಗಳನ್ನು ಮನರಂಜನೆಯೊಂದಿಗೆ ಜನ ಒಪ್ಪಿಕೊಳ್ಳುತ್ತಾರೆ. 2015 ರಲ್ಲಿ ಆರಂಭಿಸಿದ ಭುವನ್ ಅವರ ‘BB KI VINES ‘ಚಾನೆಲ್ ನೋಡು ನೋಡುತ್ತಿದ್ದಂತೆ ಲಕ್ಷಾಂತರ ಜನರ ಮನವನ್ನು ತಲುಪುತ್ತದೆ. ಮುಖ್ಯವಾಗಿ ಯುವ ಜನರನ್ನು. ಏಕೆಂದರೆ ಭುವನ್ ಬಳಸುವ ಭಾಷಾ ಪ್ರಯೋಗ ವಯಸ್ಕರಿಗೆ ಸಂಬಂಧಿಸಿದ್ದಾಗಿರುತ್ತದೆ. ಭುವನ್ ತುಂಬಾ ಬೇಗನೇ ಜನಪ್ರಿಯರಾಗುತ್ತಾರೆ. ವೈಯಕ್ತಿಕವಾಗಿ ಅತೀ ಹೆಚ್ಚು ಚಂದಾದಾರರನ್ನು ಪಡೆದವರಲ್ಲಿ ಭುವನ್ ಮೊದಲಿಗರಾಗುತ್ತಾರೆ.
ಭುವನ್ ಇಂದು ಹಾಡುಗಳನ್ನು ಬರೆಯುತ್ತಾರೆ. ಹಾಡುತ್ತಾರೆ. ಕಿರುಚಿತ್ರ,ಚಿತ್ರಗಳಲ್ಲಿ ನಟಿಸುತ್ತಾರೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಇಂದು ಭುವನ್ ಹಾಕುವ ವಿಡಿಯೋಗಳು ಬರೀ ನಿಮಿಷಗಳಲ್ಲಿ ಲಕ್ಷಾಂತರ ಜನರಿಂದ ವೀಕ್ಷಣೆ ಆಗುತ್ತದೆ.
ಭುವನ್ ಚಾನೆಲ್ ನಲ್ಲಿ ಬರೋಬ್ಬರಿ 19.3 ಮಿಲಿಯನ್ ಸಬ್ ಸ್ಕ್ರೈಬರ್ಸ್ ಇದ್ದು ಇದುವರೆಗೆ ಭುವನ್ ತಮ್ಮ ಚಾನೆಲ್ ನಲ್ಲಿ 167 ವಿಡಿಯೋಗಳನ್ನು ಆಪ್ಲೋಡ್ ಮಾಡಿದ್ದಾರೆ.
-ಸುಹಾನ್ ಶೇಕ್