Advertisement

ವೈರ ಕಟ್ಟಿಕೊಂಡವರ ಖುಷಿ

06:40 AM Sep 01, 2017 | Harsha Rao |

ತಮಿಳು ನಟ ವಿಶಾಲ್‌ ಅವರ ತಂದೆ ಜಿ.ಕೆ. ರೆಡ್ಡಿ ಅವರನ್ನು ಕರೆದು ಸಿನಿಮಾ ತೋರಿಸಿದರಂತೆ ನವರಸನ್‌. ಇದೇನೋ ವ್ಯತ್ಯಾಸವಾಗಿದೆಯಲ್ಲಾ ಅಂತ ಅವರು ತಮ್ಮ ಮಗನಿಗೆ ಚಿತ್ರ ನೋಡೋಕೆ ಹೇಳಿದ್ದಾರೆ. ಚಿತ್ರ ನೋಡಿದ ವಿಶಾಲ್‌, ಅದನ್ನು ಬೇರೆ ಭಾಷೆಗಳಿಗೆ ರೀಮೇಕ್‌ ಮಾಡುವ ಬಗ್ಗೆ ಯೋಚಿಸಿದ್ದಾರೆ … ಹಾಗಾದರೆ, ಕನ್ನಡದ “ವೈರ’ ಬೇರೆ ಭಾಷೆಗಳಿಗೆ ರೀಮೇಕ್‌ ಆಗುತ್ತಾ? ಗೊತ್ತಿಲ್ಲ. ಆಗುವುದಿಲ್ಲವಾ? ಗೊತ್ತಿಲ್ಲ. ಆಗಬಹುದಾ? ಅದೂ ಗೊತ್ತಿಲ್ಲ. ಸದ್ಯಕ್ಕಂತೂ ಇಷ್ಟು ವಿಷಯ. ಮುಂದೆ ಏನೇನು ತಿರುವುಗಳು ಬರುತ್ತವೋ ಗೊತ್ತಿಲ್ಲ.

Advertisement

ಇತ್ತೀಚೆಗೆ, “ವೈರ’ ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಿದೆ ಎಂದು ಹೇಳುವುದಕ್ಕೆ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ಮತ್ತು ನಿರ್ದೇಶಕ-ನಾಯಕ ನವರಸನ್‌ ಕರೆದಿದ್ದರು. ಚಿತ್ರದ ಕೆಲಸಗಳೆಲ್ಲವೂ ಮುಗಿದಿದ್ದು, ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು.

“ಚಿತ್ರ ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಎರಡು ಶೋಗಳನ್ನು ಹಾಕಿದ್ದೇವೆ. ಚಿತ್ರ ನೋಡಿದವರೆಲ್ಲರೂ ಖುಷಿಪಟ್ಟಿದ್ದಾರೆ. ಚಿತ್ರ ಹೀಗಿರಬಹುದು ಎಂಬ ನಿರೀಕ್ಷೆಯೊಂದಿಗೆ ಚಿತ್ರಕ್ಕೇನಾದರೂ ಬಂದರೆ, ಖಂಡಿತಾ ಪ್ರೇಕ್ಷಕರ ನಿರೀಕ್ಷೆ ಸುಳ್ಳಾಗುತ್ತದೆ. ರೊಟೀನ್‌ ಕಥೆಗಳನ್ನು ಬಿಟ್ಟು, ಬೇರೆ ತರಹ ಪ್ರಯತ್ನ ಮಾಡಿದ್ದೇವೆ. ಇಷ್ಟು ವರ್ಷಗಳಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸೋಲು-ಗೆಲುವುಗಳನ್ನು ನೋಡಿದ್ದೀನಿ. ಯಾವ ತರಹ ಚಿತ್ರ ಮಾಡಿದರೆ ಚೆಣದ ಎಂದು ಯೋಚಿಸಿಯೇ ಚಿತ್ರ ಮಾಡಿದ್ದೇವೆ. ನಿರ್ಮಾಪಕರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇನ್ನು ಮಾಧ್ಯಮದವರ ಸಹಕಾರ ಸಿಕ್ಕರೆ, ಚಿತ್ರ ಗೆಲ್ಲುತ್ತದೆ’ ಎಂದರು ನಿರ್ದೇಶಕ-ನಾಯಕ ನವರಸನ್‌.

ಇನ್ನು ನಿರ್ಮಾಪಕರ ಪ್ರೋತ್ಸಾಹ ಮೆಚ್ಚಿಕೊಂಡ ನವರಸನ್‌, “ನಿಜ ಹೇಳಬೇಕೆಂದರೆ, ನಿರ್ಮಾಪಕರು ಒಂದೇ ಒಂದು ದಿನಕ್ಕೂ ಶೂಟಿಂಗ್‌ ಸ್ಪಾಟ್‌ಗೆ ಬರಲಿಲ್ಲ. ನೇರವಾಗಿ ಮೊದಲ ಕಾಪಿ ನೋಡಿದರು. ನೋಡಿ ತುಂಬಾ ಖುಷಿಯಾಗಿರುವ ಅವರು, ಈ ಚಿತ್ರವನ್ನ ಹೇಗೆ ಬೇಕಾದರೂ ಪ್ರಚಾರ ಮಾಡಿ ಅಂತ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಈ ಚಿತ್ರವನ್ನು ನಾನೇ ಬಿಡುಗಡೆ ಮಾಡುತ್ತಿದ್ದೇನೆ. 90ರಿಂದ 100 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಸಿನಿಮಾ ಗೆದ್ದರೆ, ಚಿತ್ರಮಂದಿರಗಳನ್ನು ಹೆಚ್ಚಿಸುತ್ತೇವೆ. ಹೊಸಬರಾದ್ದರಿಂದ ಸದ್ಯಕ್ಕೆ ಸಾಕು’ ಎಂದರು.

ನಾಯಕಿ ಪ್ರಿಯಾಂಕಾ ಮಲಾ°ಡ್‌, ಈ ಹಿಂದೆ “ಬಿ.ಎಂ.ಡಬ್ಲ್ಯು’ ಮತ್ತು “ಡಬಲ್‌ ಇಂಜಿನ್‌’ ಎಂಬ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಗೊಂದು ವಿಭಿನ್ನ ಪಾತ್ರವಿದೆಯಂತೆ. “ಇದುವರೆಗೂ ಇಂತಹ ಪಾತ್ರ ಮಾಡಿರಲಿಲ್ಲ. ಇದರಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೀನಿ. ಒಳ್ಳೆಯ ಪಾತ್ರವಿದೆ. ಮಿಕ್ಕಿದ್ದು ನೀವೇ ನೋಡಿ’ ಎಂದರು. ಜೊತೆಗೆ ಅಜಯ್‌, ಶರಣ್‌, ಹ್ಯಾರಿ, ಚಿತ್ತರಂಜನ್‌ ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next