Advertisement
ಕೆಲವು ಕಡೆಗಳಲ್ಲಿ ಮನೆಗಳ ಮೇಲೂ ಮರಗಳು ಬಿದ್ದಿದ್ದಲ್ಲದೆ ಅಡಿಕೆ, ಬಾಳೆ, ತೆಂಗಿನ ಮರಗಳು ಮುರಿದು ಬಿದ್ದಿದ್ದು ಅಪಾರ ಪ್ರಮಾಣ ಹಾನಿಯಾಗಿದೆ.
ಎರಡು ಕಡೆಗಳಲ್ಲಿ ಮನೆಗೆ ಸಿಡಿಲು ಬಡಿದ ಮೂವರು ಗಾಯಗೊಂಡಿದ್ದರೆ ಮತ್ತೆರಡು ಕಡೆ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಕುಡಂಬೆಟ್ಟು ಗ್ರಾಮದ ಸುಬ್ಬೊಟ್ಟು ನಿವಾಸಿಯಾದ ಅನಿತಾ, ರಾಮಯ್ಯ ಗುರಿ ನಿವಾಸಿಗಳಾದ ಲೀಲಾವತಿ ಹಾಗೂ ಮೋಹಿನಿ ಅವರು ಸಿಡಿಲು ಬಡಿದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಅಜ್ಜಿಬೆಟ್ಟು ಗ್ರಾಮದ ಪಚ್ಚೇರಿಪಲ್ಕೆಯಲ್ಲಿ ಅಪ್ಪಿ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿ, ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಯಲ್ಲಿ ಶೋಭಾ ಅವರ ಮನೆಗೆ ಸಿಡಿಲು ಬಡಿದು ಭಾಗಶಃ ಹಾನಿಯಾಗಿದೆ.
Related Articles
Advertisement
ಸುಂಟರಗಾಳಿಯಿಂದಾಗಿ ರಸ್ತೆ ಬದಿಯ ಮರಗಳು ಉರುಳಿ ಬಿದ್ದಿದ್ದಲ್ಲದೆ ಇರ್ವತ್ತೂರು ಗ್ರಾ.ಪಂ. ವ್ಯಾಪ್ತಿಯ ಎಡೂ¤ರು ಪದವು, ಇರ್ವತ್ತೂರು, ಎರ್ಮೆನಾಡು, ಸನಂಗುಳಿ, ಪಂಜೋಡಿ, ಮಣ್ಣೂರು, ಕಲಾಬಾಗಿಲು, ಅರ್ಕೆದೊಟ್ಟು, ಗುಂಪಕಲ್ಲು, ಸೇವಾ, ಎಡೂ¤ರು ಮೊದಲಾದೆಡೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮೆಸ್ಕಾಂಗೆ ಅಪಾರ ನಷ್ಟವುಂಟಾಗಿದೆ.
ಮೂರ್ಜೆ-ವಾಮದಪದವು ರಸ್ತೆಯ ಇರ್ವತ್ತೂರುಪದವು, ಕಲಾಬಾಗಿಲುಗಳಲ್ಲಿ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ತೊಡಕುಂಟಾದರೆ, ಇರ್ವತ್ತೂರು, ಮೂಡುಪಡುಕೋಡಿ ಗ್ರಾಮಗಳ ಗ್ರಾಮಾಂತರ ರಸ್ತೆಗಳಾದ ಕಲಾಬಾಗಿಲು, ಸೇವಾ, ಮಣ್ಣೂರು, ಅರ್ಕೆದೊಟ್ಟು ಮೊದಲಾದೆಡೆ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಂಬಗಳು ಉರುಳಿ ಬಿದ್ದ ಪರಿಣಾಮ ತಂತಿಗಳು ರಸ್ತೆಗೆ ಬಿದ್ದಿವೆ.
ತೆಂಗಿನ ಮರ ಬಿದ್ದು ಮನೆಗೆ ಹಾನಿನಡ್ವಂತಾಡಿ ಮಠ ಎಂಬಲ್ಲಿ ಆನಂದ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕೆಲವೆಡೆ ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಮಣ್ಣೂರುನಲ್ಲಿಯೂ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬಂದಿ, ಸ್ಥಳೀಯರು, ಪಂಚಾಯತ್ ಸದಸ್ಯರ ಸಹಕಾರದಲ್ಲಿ ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇರ್ವತ್ತೂರು ಗ್ರಾಮಕರಣಿಕ ಪ್ರವೀಣ್ ಮತ್ತು ಸಿಬಂದಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಮಹಜರು ನಡೆಸಿದ್ದಾರೆ. ಇನ್ನು ಹಲವೆಡೆ ಅಪಾರವಾಗಿ ಅಡಿಕೆ, ತೆಂಗಿನ ಮರಗಳು ಮುರಿದಿವೆ. ಮನೆಗಳಿಗೆ ಹಾನಿಯಾಗಿದೆ. ಪೂರ್ಣ ಪ್ರಮಾಣದ ಹಾನಿಯ ವಿವರ ಇನ್ನಷ್ಟೇ ಸಿಗಬೇಕಾಗಿದೆ. ಇದೇ ಮೊದಲಿಗೆ ಭಯಂಕರವಾದ ಸುಂಟರಗಾಳಿ ಬೀಸಿದೆ ಎಂದು ಸ್ಥಳೀಯ ಹಿರಿಯರು ತಿಳಿಸಿದ್ದಾರೆ.