ಕುಳಗೇರಿ ಕ್ರಾಸ್: ಹೋಬಳಿ ಸುತ್ತ ಬುಧವಾರ ಸಂಜೆ ಬಿರುಗಾಳಿ ಸಮೇತ ಗುಡುಗು ಸಿಡಿಲಿನಿಂದ ಸುರಿದ ಆಲಿಕಲ್ಲು ಮಳೆಗೆ ಗ್ರಾಮೀಣ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಗ್ರಾಮದಲ್ಲಿನ ಚರಂಡಿ ತುಂಬಿ ನೀರು ರಸ್ತೆಮೇಲೆ ಹರಿದಿದೆ. ಸಾಕಷ್ಟು ಮರಗಳು ಧರೆಗುರುಳಿ ವಿದ್ಯುತ್ ತಂತಿ ಮೇಲೆ ಬಿದ್ದು ಅಲ್ಲಲ್ಲಿ ಕಂಬಗಳು ಮುರಿದಿವೆ.
ಕಾರಣ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕುಡಿಯುವ ನೀರಿಗೆ ಪರದಾಡಿದ ಘಟನೆ ಖಾನಾಪೂರ ಎಸ್ ಕೆ ಗ್ರಾಮದಲ್ಲಿ ನಡೆದಿದೆ.ಸುದ್ದಿ ತಿಳಿದ ಗ್ರಾಮದ ಗ್ರಾಂಪಂ ಸದ್ಯರು ಜನವಸತಿ ಪ್ರದೇಶಕ್ಕೆ ತೆರಳಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದಾರೆ.
ಕುಳಗೇರಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಬೃಹತ್ ಮರಗಳು ಅಡ್ಡ ಬಿದ್ದು ಸಂಚಾರಕ್ಕೆ ತೊಂರೆಯಾಯಿತು. ಇದರಿಂದ ಪೂರ್ತಿ ದಿನ ಗ್ರಾಮದ ಜನತೆ ಸುತ್ತುವರಿದು ಸಂಚರಿಸುವಂತಾಯಿತು.
ಜೋರಾಗಿ ಬಿಸಿದ ಬಿರುಗಾಳಿಗೆ ಗ್ರಾಮದ ತುಂಬ ತಗಡುಗಳ ಹಾರಾಟ ಕಂಡ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ವಾಹನ ಚಾಲಕರು ಕೆಲಕಾಲ ರಸ್ತೆಮೇಲೆ ನಿಲ್ಲಬೇಕಾಯಿತು.
ಹಲವು ಗ್ರಾಮಗಳಲ್ಲಿ ಏಕಾಏಕಿ ಜೋರಾದ ಬಿರುಗಾಳಿ ಬಿಸಿ ಛಾವಣಿಯ ತಗಡು ಹಾರಿ ರೈತರ ದವಸ ದಾನ್ಯಗಳು ನೀರುಪಾಲಾಗಿವೆ. ಕುಟುಂಬದ ಸದಸ್ಯರೆಲ್ಲ ಮಳೆ ನೀರಲ್ಲೇ ನೆನೆಸಿಕೊಂಡು ಮನೆಯಲ್ಲಿದ್ದ ಸರಂಜಾಮು ಸಾಗಿಸುವುದು ಎಲ್ಲೆಡೆ ಕಂಡು ಬಂತು.
ಬಿಸಿಲ ಬೇಗೆಗೆ ಬಸವಳಿದ ಜನ ಎರಡು ದಿನ ಸುರಿದ ಮಳೆ ಬಿಸಿಲ ಬೆಗೆಯನ್ನು ತಣಿಸಿದರೆ, ಬೆಳಿಗ್ಗೆಯಿಂದಲೇ ತಿವ್ರಗೊಂಡ ಬಿಸಿಲು ತಾಪಕ್ಕೆ ಜನ ತತ್ತರಿಸಿದ್ದರು. ಪ್ರತಿದಿನ ಬೆಳಿಗ್ಗೆಯಿಂದ ಬಿಸಿಲ ತಾಪ ಹೆಚ್ಚಾಗಿ ಸಂಜೆ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು.