Advertisement

ಚಂಡಮಾರುತ ನಡುವೆ ಪೈಲೆಟ್‌ ಸಾಧನೆ

09:20 PM Feb 19, 2022 | Team Udayavani |

ಲಂಡನ್‌: ಬ್ರಿಟನ್‌ಗೆ ಶುಕ್ರವಾರ ಚಂಡಮಾರುತ ಅಪ್ಪಳಿಸಿದ್ದು, ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿತ್ತು. ದೇಶದ ಎಲ್ಲ ಏರ್‌ಲೈನ್‌ಗಳ 430ಕ್ಕೂ ವಿಮಾನಗಳನ್ನು ರದ್ದು ಮಾಡಲಾಗಿತ್ತು. ಈ ನಡುವೆ ಭಾರತದ ಏರ್‌ ಇಂಡಿಯಾ ಸಂಸ್ಥೆಯ ವಿಮಾನವೊಂದನ್ನು ಲಂಡನ್‌ನ ಹೀಥ್ರೋ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂ ಸ್ಪರ್ಶ ಮಾಡಿಸಲಾಗಿದೆ.

Advertisement

ತೇಲಾಡುತ್ತಾ ಬಂದ ವಿಮಾನ ಸುರಕ್ಷಿತವಾಗಿ ರನ್‌ವೇಗೆ ಇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬ್ರಿಟನ್‌ನಲ್ಲಿ ಶುಕ್ರವಾರ ಸುಮಾರು ಗಂಟೆಗೆ 196ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸಿದೆ. ಏರ್‌ ಇಂಡಿಯಾ ವಿಮಾನ ಭೂ ಸ್ಪರ್ಶ ಮಾಡಿದ ವಿಮಾನ ನಿಲ್ದಾಣದ ಬಳಿ ಗಂಟೆಗೆ 55-60ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದಾಗಿ ಅಲ್ಲಿನ ವಿಮಾನಯಾನ ಸಚಿವಾಲಯ ತಿಳಿಸಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next