Advertisement

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

12:43 AM May 21, 2024 | Team Udayavani |

ತಿರುವನಂತಪುರ: ಆನೆಗಳು ರೈಲು ಹಳಿಗಳನ್ನು ದಾಟುತ್ತಿದ್ದರೆ ತಕ್ಷಣ ರೈಲನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಅಖೀಲ ಭಾರತ ಲೋಕೊ ರನ್ನಿಂಗ್‌ ಸ್ಟಾಫ್ ಅಸೋಸಿಯೇಶನ್‌(ಎಐಎಲ್‌ಆರ್‌ಎಸ್‌ಎ) ಹೇಳಿದೆ.

Advertisement

ಮೇ 7ರಂದು ಕಂಜೀಕೋಡ್‌ ರೈಲ್ವೇ ಸ್ಟೇಷನ್‌ ಬಳಿ ಆನೆಯೊಂದು ರೈಲಿಗೆ ಢಿಕ್ಕಿ ಹೊಡೆದು ಮೃತ ಪಟ್ಟಿತ್ತು. ಇಂಥ ಪ್ರಕರಣಗಳು ಪ್ರಾಣಿಗಳಿಗಷ್ಟೇ ಅಲ್ಲದೇ, ರೈಲಿನ ಪ್ರಯಾಣಿಕರಿಗೂ ಅಪಾಯ ತರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಎಐಎಲ್‌ಆರ್‌ಎಸ್‌ಎ ಕೇರಳ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ಗೆ ಪತ್ರ ಬರೆದಿದೆ.

ಅದರಲ್ಲಿ ರೈಲಿನ ತುರ್ತು ಬ್ರೇಕ್‌ ಬಳಸಿದರೂ ರೈಲು 1.6 ಕಿ.ಮೀ ದೂರ ಹೋಗಿ ನಿಲ್ಲುತ್ತದೆ. ತತ್‌ಕ್ಷಣಕ್ಕೆ ನಿಲುಗಡೆ ಅಸಾಧ್ಯ ಈ ಹಿನ್ನೆಲೆ ಯಲ್ಲಿ ಕಾಡುಪ್ರಾಣಿಗಳು ಪ್ರವೇಶಿಸದಂತೆ ಅಧಿಕಾರಿ ಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next