ಧಾರವಾಡ: ಕೇಂದ್ರ ಸರಕಾರದ ಅವೈಜ್ಞಾನಿಕ ಬ್ಯಾಂಕಿಂಗ್ ಸುಧಾರಣಾ ಕ್ರಮ ಹಾಗೂ ಬ್ಯಾಂಕ್‌ಗಳ ಖಾಸಗೀಕರಣ ವಿರೋ ಧಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ವಿವಿಧ ಬ್ಯಾಂಕುಗಳ ನೌಕರರು ಕೆಲಸ ಸ್ಥಗಿತಗೊಳಿಸಿ ಮಂಗಳವಾರ ಮುಷ್ಕರ ನಡೆಸಿದರು.
ನೌಕರರು ಬೆಳಿಗ್ಗೆಯಿಂದಲೇ ತಮ್ಮ ತಮ್ಮ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಿ ನಗರದ ಸ್ಟೇಟ್ ಬ್ಯಾಂಕ್ ಇಂಡಿಯಾದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ಮಾಡಿ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಿಂಡಿಕೇಟ್ ಬ್ಯಾಂಕ್ ಎಪ್ಲಾಯ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಭಗವಾನ ಶಾಬಾದಿ ಮಾತನಾಡಿ, ಬ್ಯಾಂಕುಗಳ ಸುಧಾರಣಾ ನೀತಿಗಳನ್ನು ಕೇಂದ್ರ ಸರಕಾರ ಜಾರಿಗೆ ತರುವ ಮೂಲಕ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಹುನ್ನಾರ ನಡೆಸಿದೆ.
ಇದರಿಂದ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಕೇಂದ್ರ ಸರಕಾರ ಅವೈಜ್ಞಾನಿಕ ಸುಧಾರಣಾ ನೀತಿಗಳನ್ನು ಕೈ ಬಿಡಬೇಕು. ಅಲ್ಲದೇ ಬ್ಯಾಂಕುಗಳ ವೀಲಿನ ಪ್ರಕ್ರಿಯೆಯೂ ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವದರಿಂದ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಹೀಗಾಗಿ ಮೊದಲು ಬ್ಯಾಂಕ್ ವಿಲೀನ ಪ್ರಕ್ರಿಯೆ ನಿಲ್ಲಿಸಲಿ ಎಂದು ಒತ್ತಾಯಿಸಿದರು. ಆಲ್ ಇಂಡಿಯಾ ಬ್ಯಾಂಕರ್ ಆμàಸರ್ ಅಸೋಸಿಯೇಶನ್ ದ ಸುಭಾಷ ಸುಂಕದ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಗೆ ಸಾಕಷ್ಟು ಶ್ರಮವಹಿಸಿ ದುಡಿಯುತ್ತಿರುವ ಬ್ಯಾಂಕ್ ನೌಕರರ ಹಿತ ಕಾಪಾಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ.
ಎಫ್.ಆರ್.ಡಿ.ಐ ಮಸೂದೆ ನೌಕರರಿಗೆ ಮಾರಕವಾಗಿದೆ ಎಂದರು. ಹುಬ್ಬಳ್ಳಿ- ಧಾರವಾಡ ಬ್ಯಾಂಕರ್ ಎಂಪ್ಲಾಯಿಸ್ ಅಸೋಸಿಯೇಶನ್ ಸಂಘಟನಾ ಕಾರ್ಯದರ್ಶಿ ಜಗದೀಶ ಆಲದಕಟ್ಟಿ, ಎಸ್.ಬಿ. ಬಾಂಡೆ, ಎಸ್.ಆರ್. ರಾವ್, ಸತೀಶ ರೆಡ್ಡಿ ಸೇರಿದಂತೆ ಅನೇಕ ಬ್ಯಾಂಕ್ ನೌಕರರು ಪ್ರತಿಭಟನೆಯಲ್ಲಿ ಇದ್ದರು.