ಮಂಡ್ಯ: ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಕಳಪೆ ಮಟ್ಟದ ಹಾಗೂ ಅವೈಜಾnನಿಕ ಒಳಚರಂಡಿ ಪೈಪ್‌ಲೈನ್ ಅಳವಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಾಹುತ ಸೃಷ್ಟಿಸಲು ಹೊರಟಿದ್ದಾರೆ ಎಂದು ಗ್ರಾಮಸ್ಥರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮೇಲ್ಭಾಗದ ರಸ್ತೆ ಕಾಮಗಾರಿ ನಡೆಯುತ್ತಿದೆ. ಗ್ರಾಮದ ಒಳಚರಂಡಿ ನೀರು ಸರಾಗವಾಗಿ ಹೋಗಲು ಪೈಪ್‌ಲೈನ್ ಅಳವಡಿಸಿ ನೇರವಾಗಿ ನೀರು ಸರಾಗವಾಗಿ ಹೋಗುವಂತೆ ಮಾಡದೇ ತದ್ವಿರುದ್ಧವಾಗಿ ನೀರು ಹರಿಯದಂತೆ ಮಾಡುವ ಪೈಪ್‌ಲೈನ್ ಅಳವಡಿಸಿ ಅನಾಹುತ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀಧರ್ ಅವರಿಗೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ಇಲ್ಲಿ ನಡೆಯುವ ಅವೈಜಾnನಿಕ ಕಾಮಗಾರಿಯನ್ನು ಕೆಲವು ಕಡೆ ತಡೆದು ಸರಿಪಡಿಸುವ ಕೆಲಸವಾಗಿದೆ. ಈಗಲೂ ಅದೇ ಮುಂದುವರಿದ್ದು ರಾತ್ರೋರಾತ್ರಿ ಕಾಮಗಾರಿ ಕೆಲಸ ಮುಗಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರು.
ಮೊದಲಿದ್ದ ಗ್ರಾಮದ ಹಳೇ ಚರಂಡಿ ಸರಿಯಾಗಿದ್ದು, ಹಳೇ ಗ್ರಾಪಂ ಬಿಲ್ಡಿಂಗ್ ಹಿಂಭಾಗ ಚರಂಡಿ ನೀರು ಸರಾಗವಾಗಿ ಹೋಗುತ್ತಿತ್ತು. ಈಗ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಹೋಗುವುದಿಲ್ಲ. ಬದಲಿಗೆ ಮಳೆ ನೀರು ಗ್ರಾಮದ ತುಂಬೆಲ್ಲ ಬರುತ್ತದೆ ಎಂಬುದನ್ನು ಹೇಳುತ್ತಿ ದ್ದರೂ ಕಾಮಗಾರಿ ನಡೆಸುತ್ತಿರುವವರಿಗೆ ತಿಳಿಸಿದರೂ ಅವರ ಭಾಷೆ ನಮಗೆ ಅರ್ಥವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರೂ ಕೇಳದೇ ಕಾಮಗಾರಿ ಆರಂಭಿಸಿದ್ದಾರೆ. ಇದು ನಿಲ್ಲಬೇಕು ಇಲ್ಲವಾದರೆ, ಕಾಮಗಾರಿಯನ್ನೇ ತಡೆದು ನಿಲ್ಲಿಸಲು ಗ್ರಾಮಸ್ಥರು ತೀರ್ಮಾನಿಸಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಇಂಡುವಾಳು ಚಂದ್ರಶೇಖರ್, ಎಸ್.ಸಿದ್ದೇಗೌಡ, ಎಂ.ಯೋಗೇಶ್, ಸಿದ್ದೇಗೌಡ, ದಿಲೀಪ್ ಕುಮಾರ್, ಶ್ರೀನಿವಾಸ್, ಪುಟ್ಟತಾಯಮ್ಮ, ಎಂ.ಜಯಶ್ರೀ, ಸುಧಾ, ಸಾಕಮ್ಮ, ಶಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು.