Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಹಾಗೂ ರಾಜ್ಯ ತಂಬಾಕು ಘಟಕವು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ತಂಬಾಕು ಮುಕ್ತ ತಲೆಮಾರು-ಮಾಧ್ಯಮ ಕಾರ್ಯಾಗಾರ’ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ, ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಂಡು ಬಂದರೆ ಈ ಕುರಿತು ಫೋಟೋ ತೆಗೆದು “ಸ್ಟಾಪ್‌ಟೊಬ್ಯಾಕೋ’ ಆ್ಯಪ್‌ಗೆ ಕಳುಹಿಸಬಹುದು. ಬಳಿಕ ಸಂಬಂಧಿತ ಜಿಲ್ಲಾ ಮತ್ತು ತಾಲೂಕು ಮಟ್ಟದ ತನಿಖಾ ತಂಡವು ದೂರು ತಲುಪಿದ 6 ದಿನದೊಳಗೆ ಆ್ಯಪ್‌ನಲ್ಲಿ ಫೋಟೊ ತೆಗೆದಿರುವ ನಿರ್ದಿಷ್ಟ ಪ್ರದೇಶಕ್ಕೆ ಭೇಟಿ ನೀಡಲಿದೆ. ಸಂಬಂಧಿಸಿದ ವ್ಯಕ್ತಿಗಳಿಗೆ ಕೋಟ್ಪಾ ನಿಯಮಾನುಸಾರ ದಂಡ ವಿಧಿಸಿ ಮನವರಿಕೆ ಮಾಡಲಿದೆ. ಬಳಿಕ ಪ್ರಕರಣದ ವಿರುದ್ಧ ಕ್ರಮ ಕೈಗೊಂಡಿರುವ ಬಗ್ಗೆ ಆ್ಯಪ್ ನಿಯಂತ್ರಣ ಕೊಠಡಿಯಿಂದ ದೂರುದಾರರಿಗೆ ಸಂದೇಶ ಹೋಗಲಿದೆ ಎಂದು ವಿವರಿಸಿದರು.
Related Articles
Advertisement
ಏನಿದು “ಸ್ಟಾಪ್‌ಟೊಬ್ಯಾಕೋ’ ಆ್ಯಪ್? : ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್ ನಲ್ಲಿ “ಸ್ಟಾಪ್‌ಟೊಬ್ಯಾಕೋ’ ಆ್ಯಪ್ ಅನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾರ್ವಜನಿಕರ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ, ತಂಬಾಕು ಉತ್ಪನ್ನಗಳ ಜಾಹೀರಾತು ನೀಡಿದರೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಕೊಟ್ಟರೆ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ, ಶಾಲಾ ವಠಾರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ನಿಮ್ಮ ಗಮನಕ್ಕೆ ಬಂದರೆ ಫೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ದೂರು ನೀಡಬಹುದಾಗಿದೆ.
ಏನಿದು “ಸ್ಟಾಪ್ ಟೊಬ್ಯಾಕೋ’ ಆ್ಯಪ್?: ಆ್ಯಂಡ್ರಾಯ್ಡ ಮೊಬೈಲ್‌ನಲ್ಲಿರುವ ಪ್ಲೇಸ್ಟೋರ್ ನಲ್ಲಿ “ಸ್ಟಾಪ್‌ಟೊಬ್ಯಾಕೋ’ ಆ್ಯಪ್ ಅನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬ ಹುದು. ಸಾರ್ವಜನಿಕರ ಪ್ರದೇಶಗಳಲ್ಲಿ ಧೂಮಪಾನ ಮಾಡಿದರೆ, ತಂಬಾಕು ಉತ್ಪನ್ನಗಳ ಜಾಹೀರಾತು ನೀಡಿದರೆ, ಅಪ್ರಾಪ್ತರಿಗೆ ತಂಬಾಕು ಉತ್ಪನ್ನ ಕೊಟ್ಟರೆ, ನಿಯಮ ಬಾಹಿರವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡಿದರೆ, ಶಾಲಾ ವಠಾರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವುದು ನಿಮ್ಮ ಗಮನಕ್ಕೆ ಬಂದರೆ ಫೋಟೋ ತೆಗೆದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ದೂರು ನೀಡಬಹುದಾಗಿದೆ.