ವಿಜಯಪುರ: ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಿದ್ದು, ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕಿದೆ ಎಂದು ದಲಿತಮುಖಂಡರು ದೂರಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದಠಾಣಾ ವ್ಯಾಪ್ತಿಯ ಗ್ರಾಮಗಳ ದಲಿತ ಮುಖಂಡರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಮನವಿ ಮಾಡಿದರು.
ಸಮಸ್ಯೆಗಳ ಸುರಿಮಳೆ: ಬೇಸಿಗೆ ಸಮೀಪಿಸುತ್ತಿರುವುದರಿಂದ ಎಲ್ಲೆಡೆ ಇಸ್ಪೀಟ್ ಜೂಜಾಟಕ್ಕೆ ಜನರು ಒಗ್ಗೂಡುವುದರಿಂದ ಪೊಲೀಸರು ಬೀಟ್ ವ್ಯವಸ್ಥೆ ಹೆಚ್ಚಿಸಿ ಕ್ರಮಕೈಗೊಳ್ಳಬೇಕು. ಗ್ರಾಮಗಳಲ್ಲಿ ಅನೇಕ ಬಡವರು ಸಾಲ ಮಾಡಿಕೊಂಡು ಮದ್ಯದ ದಾಸರಾಗುತ್ತಿದ್ದಾರೆ ಎಂದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಂದೀಶ್ ಮಾತನಾಡಿ, ಠಾಣಾವ್ಯಾಪ್ತಿಯಲ್ಲಿ ಕನಿಷ್ಟ ತಿಂಗಳಿಗೊಮ್ಮೆಯಾದರೂ ಸಭೆ ಕರೆದು ಸಮಸ್ಯೆ ಬಗ್ಗೆ ಗಮನಹರಿಸಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಹಳ್ಳಿಭಾಗದ ಅರಣ್ಯಪ್ರದೇಶ, ಕೆರೆ ಅಂಗಳಗಳಲ್ಲಿ ಜೂಜುಕೋರರು, ಕುಡುಕರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮೀಣ ಭಾಗದಲ್ಲಿಅನೇಕ ಸಮಸ್ಯೆಗಳಿವೆ. ಅನೇಕರು ಪೊಲೀಸ್ ಠಾಣೆಗೆ ಬರಲು ಹೆದರಿಕೊಳ್ಳುವ ಪರಿಸ್ಥಿತಿ ಇದ್ದು ಜನಸ್ನೇಹಿ ಪೊಲೀಸ್ ಆಗಿ ಎಲ್ಲರ ಸಮಸ್ಯೆಗಳಿಗೆಸ್ಪಂದಿಸಬೇಕು ಎಂದು ದಲಿತ ಮುಖಂಡರು ತಿಳಿಸಿದರು.
ಬೆಳಕಿನ ವ್ಯವಸ್ಥೆ ಇಲ್ಲ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಂಜೆ ವೇಳೆ ನೂರಾರುಮಂದಿ ಹಿರಿಯರು ವಾಕಿಂಗ್ ಹೋಗುತ್ತಾರೆ.ಸಂಜೆ ವೇಳೆ ಬೆಳಕಿನ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಕತ್ತಲೆ ಇರುವುದರಿಂದ ಅನೈತಿಕ ಚಟುವಟಿಕೆಗಳತಾಣವಾಗಿದೆ. ವೆಂಕಟಗಿರಿಕೋಟೆ ಭಾಗದಲ್ಲಿ ಎಲ್ಲೆಂಂದರಲ್ಲಿ ಕುಡುಕರ ಸಂಖ್ಯೆ ಹೆಚ್ಚಿದ್ದು, ಶಾಲಾ-ಕಾಲೇಜು ಮಕ್ಕಳು ಮದ್ಯ ಕುಡಿಯುವುದು ಕಲಿಯುವಂತಾಗಿದೆ ಎಂದು ದೂರಿದರು.
ಮುಖಂಡ ಮುನಿರಾಜು, ನಾರಾಯಣಸ್ವಾಮಿ, ಎಂ.ನಾಗರಾಜು,ರವಿಕಲಾ, ಶ್ರೀನಿವಾಸ ಗಾಂಧಿ, ಪೊಲೀಸ್ ಸಿಬ್ಬಂದಿ ಇದ್ದರು.