Advertisement
ಇಲ್ಲಿನ ಕಮಿಷನರ್ ಕಚೇರಿಯಲ್ಲಿ ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ವಲಯದ ಪ್ರಗತಿ ಪರಿಶೀಲನೆ ನಡೆಸಿದರು. ಸಾಮಾಜಿಕ ಶಾಂತಿಗೆ ಧಕ್ಕೆ ತರುವ ಶಕ್ತಿಗಳನ್ನು ಮಟ್ಟಹಾಕಲು ಕಠಿನ ಕ್ರಮಕೈಗೊಳ್ಳುವ ಬಗ್ಗೆ ಯಾವುದೇ ಹಿಂಜರಿಕೆ ಬೇಡ. ಗಾಂಜಾ ವ್ಯವಹಾರಕ್ಕೆ ವಿದ್ಯಾರ್ಥಿ, ಯುವ ಜನರು ಬಲಿಯಾಗುತ್ತಿದ್ದು , ಈ ಪಿಡುಗು ಸಮಾಜಕ್ಕೆ ಮಾರಕವಾಗಿದೆ. ಇದರ ವಿರುದ್ಧ ಕ್ರಮ ಜರಗಿಸಿ ಮತ್ತಷ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಾಗುವಂತೆ ಸೂಚಿಸಿದರು.
ನಗರ ಡಿಸಿಪಿಗಳಾದ ಶಾಂತರಾಜು, ಡಾ| ಸಂಜೀವ್ ಪಾಟೀಲ್, ಚಿಕ್ಕಮಂಗಳೂರು ಜಿಲ್ಲೆ ಎಸ್ಪಿ ಅಣ್ಣಾಮಲೈ, ದ.ಕ. ಎಸ್ಪಿ ಭೂಷಣ್ ಗುಲಾಬ್‌ರಾವ್, ಉ. ಕ. ಜಿಲ್ಲಾ ಎಸ್‌ಪಿ ವಿನಾಯಕ್ ವಿ.ಪಾಟೀಲ್, ಉಡುಪಿ ಜಿಲ್ಲಾ ಎಸ್‌ಪಿ ಕೆ.ಟಿ. ಬಾಲಕೃಷ್ಣ ಉಪಸ್ಥಿತರಿದ್ದರು.