Advertisement

ಬೈನಾದಲ್ಲಿ  ಕನ್ನಡಿಗರ ತೆರವು ನಿಲ್ಲಿಸಿ: ಪಾರೀಕರ್‌ಗೆ ಶೆಟ್ಟರ್‌ ಪತ್ರ

07:05 AM Oct 01, 2017 | Harsha Rao |

ಬೆಂಗಳೂರು: ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರನ್ನು ತೆರವುಗೊಳಿಸದೆ ಅವರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಅವರು ಗೋವಾ ಸಿಎಂ ಮನೋಹರ್‌ ಪಾರೀಕರ್‌ಗೆ ಪತ್ರ ಬರೆದಿದ್ದಾರೆ.

Advertisement

ಗೋವಾದ ಬೈನಾ ಬೀಚ್‌ನಲ್ಲಿ ನಾಲ್ಕು ದಶಕಕ್ಕಿಂತಲೂ ಹೆಚ್ಚು ಕಾಲದಿಂದ ಕನ್ನಡಿಗರು ನೆಲೆಸಿದ್ದು, ಅವರಿಗೆ ಸೇರಿದ 55 ಮನೆಗಳನ್ನು ತೆರವುಗೊಳಿಸುವಂತೆ ಸ್ಥಳೀಯ ಆಡಳಿತ ನೊಟೀಸ್‌ ಜಾರಿ ಮಾಡಿದೆ. ಇದರಿಂದ ಕನ್ನಡಿಗರು ಆತಂಕಕ್ಕೆ ಸಿಲುಕಿದ್ದು, ಅವರ ಹಿತರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕನ್ನಡಿಗರು ವಾಸ್ತವ್ಯವಿರುವ ವಿವಾ ದಿತ ಭೂಮಿ ಈ ಹಿಂದೆ ಚರ್ಚ್‌ ಒಂದಕ್ಕೆ ಸೇರಿದ್ದಾಗಿದ್ದು, ಅದನ್ನು ಖಾಸಗಿ ನಿರ್ಮಾಣ ಸಂಸ್ಥೆಗೆ ಮಾರಾಟ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯು ಅಲ್ಲಿ ಭೂಮಿ ಖರೀದಿಸಿರುವ ಕನ್ನಡಿಗರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿತ್ತು. ಆದರೆ, ಆ ಸಂಸ್ಥೆಯು ಪರ್ಯಾಯ ವ್ಯವಸ್ಥೆ ಮಾಡುವಲ್ಲಿ ವಿಫ‌ಲವಾದ ಕಾರಣ ಕನ್ನಡಿಗರು ಮನೆಯಿಲ್ಲದಂತಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಖಾಸಗಿ ಸಂಸ್ಥೆ ಮಾಡಿದ ಪ್ರಮಾದಕ್ಕೆ ಕನ್ನಡಿಗರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಜಗದೀಶ್‌ ಶೆಟ್ಟರ್‌ ಪತ್ರದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next