Advertisement
ಡೇಟಾ ಕಳವು ಅಥವಾ ನಕಲು ಮಾಡುವ ಸಾಧ್ಯತೆಯಿದೆ! ಜತೆಗೆ “ಮಾಲ್ವೇರ್’ ಎಂಬ ಆ್ಯಪ್ ಮೂಲಕ ಆ್ಯಂಡ್ರ್ಯಾಯ್ಡ ಮೊಬೈಲ್ ಹ್ಯಾಕ್ ಮಾಡುವ ಸೈಬರ್ ವಂಚಕರು ಸಕ್ರಿಯವಾಗಿದ್ದಾರೆ.
Related Articles
Advertisement
ಅಂತಾರಾಷ್ಟ್ರೀಯ ಮಟ್ಟದ ದಂಧೆ: ಕಳೆದ ಹತ್ತಾರು ವರ್ಷಗಳಿಂದ ಸಾರ್ವಜನಿಕರ ಡೇಟಾ ಮಾರಾಟ ದಂಧೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ನಡೆಯುತ್ತಿದೆ. ಹ್ಯಾಕರ್ಸ್‌ಗಳು ಹಾಗೂ ನಿರ್ದಿಷ್ಟ ಸಂಸ್ಥೆಗಳು ಪ್ರತಿ ದೇಶದಲ್ಲೂ ಆ್ಯಪ್, ಸಾಫ್ಟ್ವೇರ್, ಇತರೆ ಮಾರ್ಗಗಳ ಮೂಲಕ ಸಾರ್ವಜನಿಕರ ಡೇಟಾ ಸಂಗ್ರಹಿಸುತ್ತವೆ. ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಿ ಕೋಟ್ಯಂತರ ರೂ. ವ್ಯವಹಾರ ನಡೆಸುತ್ತಿದ್ದಾರೆ.
ಇತ್ತೀಚೆಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಕೂಡ ಸರ್ಕಾರದ ವೆಬ್‌ಸೈಟ್, ಆ್ಯಪ್ ಹ್ಯಾಕ್ ಮಾಡಿದ್ದ. ಅದರಿಂದಲೇ ಕೋಟ್ಯಂತರ ರೂ. ದಂಧೆ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿತ್ತು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು.
ಮಾಲ್ವೇರ್ ಮೂಲಕ ಡೇಟಾ ಕಳವು: ವಿವಿಧ ಆಮಿಷವೊಡ್ಡಿ ಸಾರ್ವಜನಿಕರ ಡೇಟಾ ಹಾಗೂ ಹಣ ಲೂಟಿ ಮಾಡುತ್ತಿದ್ದ ಸೈಬರ್ ಖದೀಮರು, ಇದೀಗ, ಮಾಲ್ವೇರ್ ಮೂಲಕ ಆ್ಯಂಡ್ರಾಯ್ಡ ಮೊಬೈಲ್ ಹ್ಯಾಕ್ ಮಾಡಿ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಸೈಬರ್ ತಜ್ಞರು, ಪೊಲೀಸರ ಪ್ರಕಾರ ಸುಮಾರು 250 ಬ್ಯಾಂಕಿಗ್ ಆ್ಯಪ್ ಗುರಿಯಾಗಿಸಿ ವಂಚನೆ ಮಾಡಲಾಗುತ್ತಿದೆ. ಒಮ್ಮೆ ಮಾಲ್ವೇರ್ ಮೊಬೈಲ್ ಅಥವಾ ಲ್ಯಾಪ್ ಟಾಪ್, ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್ ಆಗಿಬಿಟ್ಟರೆ ಮೊಬೈಲ್‌ಗೆ ಬರುವ ಓಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸಂದೇಶಗಳು ಸೇರಿ ಎಲ್ಲಾ ಗೌಪ್ಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಸೈಬರ್ ವಂಚಕರ ಕೈ ಸೇರಲಿದೆ.
ಇದನ್ನೂ ಓದಿ: ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !
ಫ್ರೀ ವೈ-ಫೈ ಕಡೆಯೂ ಎಚ್ಚರ
ಇತ್ತೀಚೆಗೆಕೆಲವೊಂದು ಪಾರ್ಟಿ, ಹೋಟೆಲ್ ಹಾಗೂ ಪ್ರವಾಸಿ ತಾಣಗಳಲ್ಲಿ ಫ್ರೀ ವೈ-ಫೈ ನೀಡುತ್ತೇವೆ ಎಂದು ಜಾಹೀರಾತು ನೀಡುತ್ತಾರೆ. ಇಂತಹಕಡೆ ಮೊಬೈಲ್ ಬಳಸುವಾಗ ಎಚ್ಚರಿಕೆ ಇರಬೇಕು. ವ್ಯಾಟ್ಸ್‌ಆ್ಯಪ್ ಸಂದೇಶ, ಫೇಸ್‌ಬುಕ್, ಬ್ರೌಸಿಂಗ್ (ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಬಾರದು) ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ನೆಟ್‌ಬ್ಯಾಕಿಂಗ್, ಹಣದ ವ್ಯವಹಾರ ನಡೆಸುವಾಗ ಜಾಗೃತೆ ವಹಿಸಬೇಕು. ವೈ-ಫೈ ಮೂಲಕವೇ ತಮ್ಮ ಬ್ಯಾಕಿಂಗ್ ಡೇಟಾಕಳವು ಮಾಡುತ್ತಾರೆ. ಹತ್ತಾರು ದಿನಗಳ ಬಳಿಕಡೇಟಾ ಮೂಲಕವೇ ಖಾತೆಯಿಂದ ಹಣ ಲೂಟಿ ಮಾಡುತ್ತಾರೆ. ಇಲ್ಲವಾದಲ್ಲಿ ನಿಮ್ಮ ವೈಯಕ್ತಿಕ ವಿವರ ಸಂಗ್ರಹಿಸಿಕೊಳ್ಳುತ್ತಾರೆ.
ಹೇಗೆ ಇನ್‌ಸ್ಟಾಲ್ ಆಗುತ್ತೆ?
ಮೊದಲಿಗೆ ಇಂಟರ್ನೆಟ್ ಬಳಕೆ ಮಾಡುವ ವ್ಯಕ್ತಿಗಳ ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಬಳಿಕ ಅಂತಹ ಜಾಹೀರಾತುಗಳನ್ನು ಇ-ಮೇಲ್, ಬ್ರೌಸರ್ ಗಳಲ್ಲಿ ಪ್ರಕಟಿಸುತ್ತಾರೆ. ಸಂದೇಶ, ಫೋಟೋ, ಇ-ಮೇಲ್ ಮೂಲಕವು ವಿವಿಧ ಆಮಿಷಗಳನ್ನೊಡ್ಡಿ ಲಿಂಕ್ ರೂಪದಲ್ಲಿ ಮಾಲ್ವೇರ್ ರವಾನಿಸಲಾಗುತ್ತದೆ. ಅಪರಿಚಿತ ಸಂದೇಶಗಳ ಕುತೂಹಲ ಹೊಂದಿರುವ ವ್ಯಕ್ತಿಗಳು ಅದರ ಲಿಂಕ್ ಒತ್ತಿದ ಕೂಡಲೇ ಮಾಲ್ವೇರ್ ಇನ್‌ಸ್ಟಾಲ್ ಆಗುತ್ತದೆ. ಅದು ಮೊಬೈಲ್ ಬಳಕೆದಾರರಿಗೂ ಮಾಹಿತಿ ಇರಲ್ಲ.
ಪ್ರಮುಖವಾಗಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗ್ಳನ್ನೇ ಗುರಿಯಾಗಿಸಿ ಅಕ್ರಮ ಎಸಗುತ್ತಿದ್ದಾರೆ. ಒಮ್ಮೆ ಮಾಲ್ವೇರ್ ಇನ್‌ಸ್ಟಾಲ್ ಆಗುತ್ತಿದ್ದಂತೆ ಲೋಕೇಷನ್, ಸಂದೇಶ, ಮೊಬೈಲ್‌ನಲ್ಲಿರುವ ಆ್ಯಪ್ ವಿವರ, ದೃಢೀಕೃತ ಸಂಖ್ಯೆ (ಪಾಸ್‌ವರ್ಡ್ ಬದಲಾಯಿಸಿದಾಗ ಬರುವ ಅಂಥೆಂಟಿಕೇಷನ್ ನಂಬರ್), ಮೊಬೈಲ್ ಲಾಕ್, ಅಲ್ಲದೆ, ಕೆಲವೊಂದು ಸಂದರ್ಭದಲ್ಲಿ ಕೀಬೋರ್ಡ್ ಅನ್ನು ಅನಾಮಿಕ ವ್ಯಕ್ತಿ ಬಳಸುತ್ತಿರುತ್ತಾನೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು.
ಸೈಬರ್ ಪೊಲೀಸರ ತಜ್ಞರ ಸಲಹೆ
1 ಅನಾಮಿಕ ಸಂದೇಶಗಳ ಲಿಂಕ್ ಕ್ಲಿಕ್ ಮಾಡಬೇಡಿ
2 ಪದೇ ಪದೆಬರುವ ಆ್ಯಂಡ್ರಾಯ್ಡ ಸಾಫ್ಟ್ವೇರ್ ಅಪ್‌ಡೇಟ್‌ಲಿಂಕ್ ಒತ್ತಬೇಡಿ
3 ಮೊಬೈಲ್‌ನಲ್ಲಿರುವ ಸೆಟ್ಟಿಂಗ್ ಆ್ಯಪ್‌ಗೆ ಹೋಗಿ ಅಪ್‌ಡೇಟ್ ಕೊಡಬೇಕು.
4 ಗೂಗಲ್ ಪ್ಲೇ ಸ್ಟೋರ್ ಹೊರತು ಪಡಿಸಿಬೇರೆ ಬೇರೆ ವೆಬ್‌ಸೈಟ್ ಮೂಲಕ ಆ್ಯಪ್ ಡೌನ್ ಲೋಡ್ ಮಾಡಬೇಡಿ.
5 ಅಪರಿಚಿತ ನಂಬರ್ ಹಾಗೂಇ-ಮೇಲ್ ಗಳಲ್ಲಿರುವ ಬರುವ ಸಂದೇಶ, ಫೋಟೋಗಳ ಮೇಲೆ ಕ್ಲಿಕ್ ಮಾಡಬೇಡಿ.
6 ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಜಾರ್ಜಿಂಗ್ ಮಾಡುವಾಗ ಎಚ್ಚರಿಕೆ ವಹಿಸಿ
ಸಾರ್ವಜನಿಕ ಸ್ಥಳಗಳಲ್ಲಿರುವ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಯುಎಸ್‌ಬಿ ಕೇಬಲ್ ಬಳಸಿ ಮೊಬೈಲ್ ಚಾರ್ಜಿಂಗ್ ಮಾಡುವಾಗ ಎಚ್ಚರಿಕೆ ವಹಿಸಿ. ತಮ್ಮ ಸ್ವಂತ ಚಾರ್ಜಿಂಗ್ ವ್ಯವಸ್ಥೆಯಲ್ಲೇ ಮೊಬೈಲ್ ಚಾರ್ಜಿಂಗ್ ಮಾಡಿಕೊಳ್ಳಿ. ಫ್ರೀ ವೈ-ಫೈ ನಲ್ಲಿ ಇಂಟರ್ನೆಟ್ ಬ್ಯಾಂಕಿಂಗ್ ಹಾಗೂ ವೈಯಕ್ತಿಕ ವಿಚಾರ ಚರ್ಚೆ ಮಾಡಬೇಡಿ. ಆಮಿಷವೊಡ್ಡುವ ಜಾಹೀರಾತುಗಳ ಲಿಂಕ್ ಒತ್ತಬೇಡಿ.
- ಬಿ.ಎನ್.ಫಣಿಂಧರ್, ವಿಧಿ ವಿಜ್ಞಾನ ತಜ್ಞರು, ಐಟಿ ವಕೀಲರು