ಕಾಬೂಲ್ : ಅಫ್ಘಾನಿಸ್ಥಾನದಲ್ಲಿ ತಮ್ಮದೇ ಸರ್ಕಾರ ರಚಿಸಲು ಹೊರಟಿರುವ ತಾಲಿಬಾನಿಗಳು ಹಲವಾರು ಹೊಸ ಹೊಸ ಕಾನೂನುಗಳನ್ನು ತರುತ್ತಿದ್ದಾರೆ. ಶರಿಯಾ ನಿಯಮದ ಅಡಿಯಲ್ಲಿ ನಿಯಮಗಳನ್ನು ಜಾರಿ ಮಾಡಲು ಹೊರಟಿರುವ ಉಗ್ರ ಸರ್ಕಾರ ಇದೀಗ ತನ್ನ ಶಿಕ್ಷೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಶರಿಯಾ ಕಾನೂನಿನ ಪ್ರಕಾರ ಪುರುಷರು ಜೊತೆಯಲ್ಲಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಅಲ್ಲದೆ ಸಂಗೀತ ಮತ್ತು ಇತರೆ ಮನರಂಜನೆಯ ಕಾರ್ಯಕ್ರಮಗಳನ್ನು ನಿಷೇಧ ಮಾಡಲಾಗಿದೆ.
“ನಾವು ಇಸ್ಲಾಮಿಕ್ ನಿಯಮಗಳ ಪ್ರಕಾರ ಶಿಕ್ಷಿಸುತ್ತೇವೆ. ಇಸ್ಲಾಂ ನಮಗೆ ಯಾವ ಮಾರ್ಗದರ್ಶನ ನೀಡುತ್ತದೆಯೋ, ನಾವು ಅದಕ್ಕೆ ತಕ್ಕಂತೆ ಶಿಕ್ಷಿಸುತ್ತೇವೆ ಎಂದು ಮೊಹಮ್ಮದ್ ಯೂಸುಫ್ ಹೇಳಿದ್ದಾನೆ. ತಾಲಿಬಾನಿಗಳು ತಮ್ಮ ಹಿಂದಿನ ಆಡಳಿತದಲ್ಲಿ ಅಪರಾಧ ಮಾಡಿದವರಿಗೆ ಶಿಕ್ಷೆಯಾಗಿ ಹೊಡೆಯುವುದು, ಕಲ್ಲೆಸೆಯುವುದು, ಕತ್ತರಿಸುವ ಕ್ರಮಗಳನ್ನು ಕೈಗೊಂದಿದ್ದರು.
ತಾಲಿಬಾನಿಗಳ ಶಿಕ್ಷಗಳು
ಉದ್ದೇಶಪೂರ್ವಕ ಕೊಲೆ ಮಾಡಿದರೆ ಹತ್ಯೆ
ಉದ್ದೇಶರಹಿತ ಕೊಲೆಯಾಗಿದ್ದಲ್ಲಿ ದಂಡ ವಸೂಲಿ
ಕಳ್ಳತನ ಮಾಡಿದವರ ಕೈಗಳನ್ನು ಕತ್ತರಿಸುವುದು
ಅನೈತಿಕ ಸಂಬಂಧ ಹೊಂದಿದ್ದಲ್ಲಿ ಕಲ್ಲಿನಿಂದ ಹೊಡೆಯುವುದು
ಮಹಿಳೆ ಮತ್ತು ಪುರುಷ ಇಬ್ಬರೂ ಅನೈತಿಕ ಸಂಬಂಧದಲ್ಲಿ ತೊಡಗಿದ್ದರೆ ಸಾರ್ವಜನಿಕವಾಗಿ ಹತ್ಯೆಗೈಯ್ಯುವುದು