Advertisement

ನೆದರ್ಲೆಂಡ್ಸ್‌ನಲ್ಲಿ 4000 ವರ್ಷ ಹಿಂದಿನ ಆರಾಧನಾ ಸ್ಥಾನ ಪತ್ತೆ!

08:22 PM Jun 22, 2023 | Team Udayavani |

ಆ್ಯಮ್‌ಸ್ಟರ್ಡಾಮ್‌: ಗತಕಾಲ ಮತ್ತು ಭವಿಷ್ಯತ್‌ಕಾಲಗಳು ಯಾವಾಗಲೂ ಮನುಷ್ಯನಿಗೆ ಅತ್ಯಂತ ಕುತೂಹಲದ ಸಂಗತಿಗಳು. ಪುರಾತತ್ವ ಇಲಾಖೆ ಯಾವಾಗಲೂ ಹಳತನ್ನು ಹುಡುಕುತ್ತಲೇ ಇರುತ್ತದೆ. ನೆದರ್ಲೆಂಡ್ಸ್‌ನ ಕೇಂದ್ರಭಾಗದಲ್ಲಿ ಅಲ್ಲಿನ ಪುರಾತತ್ವ ಇಲಾಖೆ 4000 ವರ್ಷಗಳಷ್ಟು ಹಿಂದಿನ ಆರಾಧನಾ ಸ್ಥಾನವೊಂದನ್ನು ಪತ್ತೆಹಚ್ಚಿದೆ!

Advertisement

ಟಯೆಲ್‌ ಎಂಬ ನಗರದಲ್ಲಿ (ರಾಟಡ್ಯಾìಮ್‌ನಿಂದ 70 ಕಿ.ಮೀ. ದೂರ) ನೆಲವನ್ನು ಉತ್ಖನನ ಮಾಡಿದಾಗ ಅಪೂರ್ವ ಸ್ಥಾನ ಪತ್ತೆಯಾಗಿದೆ. ಸೂರ್ಯನ ಚಲನೆಗೆ ಅನುಸಾರವಾಗಿ ಇಲ್ಲಿನ ಎಲ್ಲ ವಿಧಿಗಳು ನಡೆಯುತ್ತಿದ್ದುದ್ದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಕಂದಕಗಳು, ದಿಬ್ಬಗಳಿರುವ ಈ ಜಾಗದಲ್ಲಿ ಪ್ರಾಣಿಗಳ ಅಸ್ಥಿಪಂಜರ, ಮನುಷ್ಯನ ತಲೆಬುರುಡೆಗಳು, ಕಂಚಿನಿಂದ ಮಾಡಿದ ಈಟಿಯೂ ಲಭಿಸಿದೆ.

ಇಂಗ್ಲೆಂಡ್‌ನ‌ಲ್ಲಿ ಹಿಂದೆ ಪತ್ತೆಯಾಗಿದ್ದ ಅತ್ಯಂತ ಪ್ರಾಚೀನ ಶಿಲಾವೃತ್ತಗಳ ಮಾದರಿಯಲ್ಲೇ ಇಲ್ಲೂ ಸೂರ್ಯನ ಚಲನೆಗೆ ತಕ್ಕಂತೆ ಸಮಯ ನಿರ್ಧರಿಸುವ ವ್ಯವಸ್ಥೆ ಇದ್ದಿದ್ದಕ್ಕೆ ಸಾಕ್ಷಿ ಲಭಿಸಿದೆ. ಅದೇ ಮಾದರಿ ನೆದರ್ಲೆಂಡ್ಸ್‌ನಲ್ಲೂ ಗೋಚರಿಸಿದೆ. ಇನ್ನೂ ವಿಶೇಷವೆಂದರೆ ಇಲ್ಲೊಂದು ಹೆಣ್ಣಿನ ಸಮಾಧಿ ಪತ್ತೆಯಾಗಿದೆ. ಆಕೆ ಗಾಜಿನ ಮಣಿಗಳನ್ನು ಧರಿಸಿದ್ದಳು. ಅದು ಅಲ್ಲಿಂದ 5000 ಕಿ.ಮೀ. ದೂರವಿರುವ ಮೆಸಪಟೋಮಿಯದಲ್ಲಿ (ಈಗಿನ ಇರಾಕ್‌) ಸಿದ್ಧಗೊಂಡಿದ್ದು!

Advertisement

Udayavani is now on Telegram. Click here to join our channel and stay updated with the latest news.

Next