Advertisement

Wild Elephant  ಕಾಟ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ಆನೆ ಬಿಡಾರ

01:31 AM Oct 05, 2024 | Team Udayavani |

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹಾಗೂ ಕಾಡುಪ್ರಾಣಿ ಮಾನವ ಸಂಘರ್ಷ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆನೆ ಬಿಡಾರ ನಿರ್ಮಾಣ ಮಾಡಬೇಕೆಂಬ ಕೂಗಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಜಿಲ್ಲೆಯಲ್ಲಿ ಆನೆ ಬಿಡಾರ ನಿರ್ಮಾಣ ಕನಸಿಗೆ ಬಲ ತುಂಬಿದ್ದಾರೆ.

Advertisement

ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿ ಯಲ್ಲಿ ಆನೆ ಬಿಡಾರ ನಿರ್ಮಿಸಲು ಅರಣ್ಯ ಇಲಾಖೆ 8 ಸ್ಥಳಗಳನ್ನು ಗುರುತಿಸಿತ್ತು. ಸದ್ಯ ಮೂರು ಸ್ಥಳಗಳನ್ನು ಅಂತಿಮ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುತ್ತೋಡಿ ಅಭಯಾರಣ್ಯದ ನೇಚರ್‌ ಕ್ಯಾಂಪ್‌ನ ಎರಡು ಸ್ಥಳಗಳು ಹಾಗೂ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಒಂದು ಸ್ಥಳವನ್ನು ಅಂತಿಮಗೊಳಿಸಲಾಗಿದೆ.

ಆನೆ ಬಿಡಾರ ನಿರ್ಮಾಣಕ್ಕೆ ಅಂದಾಜು ಎರಡು ಕೋಟಿ ರೂ. ವೆಚ್ಚವಾಗಲಿದ್ದು, ಕನಿಷ್ಟ ಪಕ್ಷ ಐದು ಎಕರೆ ಜಾಗದ ಆವಶ್ಯಕತೆ ಇದೆ. ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿರುವ ಮೂರು ಸ್ಥಳಗಳಿಗೆ ಹುಲಿ ಪ್ರಾಜೆಕ್ಟ್‌ನ ಎಸಿಎಫ್‌ ಆರ್‌. ಮನೋಜ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇವರ ತೀರ್ಮಾನದ ಬಳಿಕ ಸ್ಥಳ ನಿಗದಿಯಾಗಲಿದೆ.

ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷ ಅಧಿಕವಾಗಿದ್ದು, ಕಾಡಾನೆಗಳ ಉಪಟಳ ವಿಪರೀತವಾಗಿದೆ. ಸಕಲೇಶಪುರದಿಂದ ಆಗಮಿಸುವ ಆನೆಗಳು ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ತೋಟಗಳನ್ನು ನಾಶಪಡಿಸುವುದಲ್ಲದೆ ಕಳೆದ ಕೆಲವು ವರ್ಷಗಳಲ್ಲಿ ಅನೇಕರ ಜೀವವನ್ನು ಬಲಿ ಪಡೆದುಕೊಂಡಿವೆ. ಕಾಡಾನೆಗಳ ನಿಯಂತ್ರಣಕ್ಕೆ ಆನೆ ಬಿಡಾರ à ಭಾಗಕ್ಕೆ ಅಗತ್ಯವಾಗಿದೆ. ಕಾಡಿನಿಂದ ನಾಡಿನತ್ತ ನುಗ್ಗುವ ಆನೆಗಳಿಗೆ ಕಡಿವಾಣ ಹಾಕಲು ಆನೆ ಬಿಡಾರ ಅತ್ಯಂತ ಮಹತ್ವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next