Advertisement

ಸಾಮಾಜಿಕ ಅಂತರಕ್ಕೆ “ಕಲ್ಲು’

07:01 AM Jun 07, 2020 | Suhan S |

ಚಡಚಣ: ತದ್ದೇವಾಡಿ ಗ್ರಾಮದಲ್ಲಿ ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರಹುಣ್ಣಿಮೆಯಂದು ಸಾವಿರಾರು ಜನ ಸೇರಿಕೊಂಡು ಯುವಕರಿಂದ ಸಂಗ್ರಾಣಿ(ಗುಂಡು) ಕಲ್ಲು ಎತ್ತುವ ಸ್ಪರ್ಧೆ ಹಾಗೂ ಬಣ್ಣ ಹಚ್ಚಿದ ಎತ್ತಿನಗಾಡಿ ಸ್ಪರ್ಧೆ ನಡೆಸಿದರು.

Advertisement

ತದ್ದೇವಾಡಿಯ ಜಗನ್ನಾಥ ಬಿರಾದಾರ 145 ಕೆಜಿ ಭಾರದ ಗುಂಡು ಕಲ್ಲು ಎತ್ತುವುದನ್ನು ನೋಡಿದ ಪ್ರೇಕ್ಷಕರು ಸಾಮಜಿಕ ಅಂತರ ಮರೆತು ಪರಸ್ಪರ ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆದರು. ದೇವರ ನಿಂಬರಗಿ, ಝಳಕಿಯಲ್ಲಿ ತಲಾ ಒಂದು, ಧುಮಕನಾಳದಲ್ಲಿ ಎರಡು ಹಾಗೂ ಕಪನಿಂಬರಗಿಯಲ್ಲಿ ಮೂರು ಕೋವಿಡ್ ಪಾಸಿಟಿವ್‌ ಕೇಸ್‌ ಪತ್ತೆಯಾಗುತ್ತಿದ್ದರು ಜನ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next