Advertisement

Kushtagi: ಬೆಳೆಗಳಿಗೆ ಕಂಟಕವಾದ ಕಂಕರ್ ಕ್ರಷರ್ ಪ್ಲಾಂಟ್

12:22 PM Dec 15, 2023 | Team Udayavani |

ಕುಷ್ಟಗಿ: ರಾಷ್ಟ್ರೀಯ ಹೆದ್ದಾರಿಗಾಗಿ  OSE ಕಂಪನಿಗೆ ಸೇರಿದ ಜಲ್ಲಿಕಲ್ಲು (ಕಂಕರ್) ಕ್ರಷರ್ ಪ್ಲಾಂಟ್ ನಿಂದ ತೋಟಗಾರಿಕೆ ಹಾಗೂ ಮಳೆಯಾಶ್ರಿತ 50 ಎಕರೆ ಬೆಳೆಗಳಿಗೆ ಮಾರಕವಾಗಿದೆ.

Advertisement

ಓರಿಯಂಟಲ್ ಸ್ಟಕ್ಚರಲ್ ಇಂಜಿಯರ್ಸ್ (OSE)) ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಾಗಿ ಯಲಬುರ್ಗಾ ತಾಲೂಕಿನ ಬುಡಕುಂಟಿ ಸೀಮಾದಲ್ಲಿ 7 ಎಕರೆ ಜಮೀನು ಖರೀದಿಸಿದೆ. ಇದರ ಕೆಲಸದಿಂದ ಕುಷ್ಟಗಿ ತಾಲೂಕಿನ ಕಂದಕೂರು ಸೀಮಾದಲ್ಲಿ ಕಳೆದ 12 ವರ್ಷಗಳಿಂದ ಹೆದ್ದಾರಿ ಕೆಲಸಕ್ಕೆ ಜಲ್ಲಿಕಲ್ಲು (ಕಂಕರ್) ನುರಿಸಲು ಆರಂಭಿಸಿದೆ.

ನಿರಂತರವಾಗಿ ಕಲ್ಲು ನುರಿಸುವ ವೇಳೆ ಏಳುವ ಬಿಳಿ ಪೌಡರ್ ಗಾಳಿಗುಂಟ ಹಾರಿ ಬೆಳೆಗಳ ಮೇಲೆ ಹರಡಿಕೊಳ್ಳುತ್ತಿದ್ದು, ಇದರಿಂದ ಬೆಳೆಗಳ ಬೆಳವಣಿಗೆ ಕುಂಟಿತವಾಗಿದೆ. ದಾಳಿಂಬೆ, ಲಿಂಬೆ ಸೇರಿದಂತೆ  ಹಿಂಗಾರು ಬೆಳೆಗಳ ಎಲೆಯ ಮೇಲೆ ಬಿಳಿ ಪೌಡರ್ ಜಮೆಯಾಗುತ್ತಿದ್ದು, ಬೆಳೆಗಳ ಬೆಳವಣಿಗೆ ಮಾರಕವಾಗಿದೆ.

ಈ ಕುರಿತು ಸಂಬಂಧಿಸಿದ ಕಂಕರ್ ಕ್ರಷರ್ ಪ್ಲಾಂಟ್ ಮೇಲುಸ್ತುವಾರಿ ವಹಿಸಿಕೊಂಡಿರುವ ಅಬ್ದುಲ್ ಖಾದರ್ (ಖಾನ್ ಸಾಬ್) ಅವರಿಗೆ ಹಲವು ಬಾರಿ ಈ ಬಗ್ಗೆ ರೈತರು ಎಚ್ಚರಿಸಿದಾಗ್ಯೂ ಲೆಕ್ಕಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಈ ಕಂಕರ್ ಕ್ರಷರ್ ಪ್ಲಾಂಟ್ ಪಕ್ಕದ ರೈತ ದೇವೇಂದ್ರಪ್ಪ ಪಿರಡ್ಡಿ ಅವರಿಗೆ ಸೇರಿದ 8 ಎಕರೆ ತೋಟವಿದೆ. ಈ ಮೊದಲು ಈ ಪ್ಲಾಂಟ್ ಪಕ್ಕದ ತೋಟದಲ್ಲಿ ಹೆಬ್ಬೇವು ಗಿಡಗಳಿದ್ದರಿಂದ ಬಿಳಿ ಪೌಡರ್ ನಿಯಂತ್ರಣದಲ್ಲಿತ್ತು.

ಕೆಲವು ತಿಂಗಳ ಹಿಂದೆ ಹೆಬ್ಬೇವು ಕಟಾವು ಮಾಡಿದ್ದರಿಂದ ವಿಪರೀತ ಧೂಳು ವ್ಯಾಪಿಸುತ್ತಿದೆ. ಓಬಿರಾಯನ ಕಾಲದ ಯಂತ್ರಗಳ ಪ್ಲಾಂಟ್ ಇದಾಗಿದ್ದು, ಬಿಳಿ ಪೌಡರ್ ಪ್ರಮಾಣ ದಿನೇ ದಿನೇ ಜಾಸ್ತಿಯಾಗಿದ್ದು ಈ ಪ್ಲಾಂಟ್ ವಿರುದ್ದವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೆ ದೂರು ನೀಡುವುದಾಗಿ ದೇವೇಂದ್ರಪ್ಪ ಪಿರಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next