Advertisement

ಕಾರಿಗೆ ಕಲ್ಲೆಸೆದು ಹಾನಿ: ನಾಲ್ವರ ವಿರುದ್ಧ ಕೇಸು

09:28 AM Jun 06, 2019 | Team Udayavani |

ಸೋಮವಾರಪೇಟೆ: ರಂಜಾನ್‌ ಪ್ರಾರ್ಥನೆಗೆ ತೆರಳುತ್ತಿದ್ದಾಗ ಗಲಾಟೆ ನಡೆದು ಕಾರಿಗೆ ಹಾನಿ ಮಾಡಿದ ಪರಿಣಾಮ ನಗರದಲ್ಲಿ ಸ್ವಲ್ಪಹೊತ್ತು ಬಿಗುವಿನ ವಾತಾವರಣ ನೆಲೆಸಿತ್ತು.

Advertisement

ಚೌಡ್ಲು ಗ್ರಾ.ಪಂ.ನ ಗಾಂಧಿನಗರದ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಬರುತ್ತಿದ್ದ ಗಾಂಧಿನಗರದ ಪ್ರವೀಣ್‌ ಅವರು ಹಾರನ್‌ ಮಾಡಿದ ವಿಷಯದಲ್ಲಿ ವಾಗ್ವಾದವಾಗಿತ್ತು.

ಬಳಿಕ ಕರೀಂ ಬೇಗ್‌, ಅಜೀಂ ಬೇಗ್‌, ಹುಮಾಯೂನ್‌ ಬೇಗ್‌ ಹಾಗೂ ಚಾಂದು ಮತ್ತಿತರರು ಜಾತಿ ನಿಂದನೆ ಮಾಡಿ ಕಲ್ಲು ತೂರಿ ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ಹಲ್ಲೆಗೂಳಗಾದ ಪ್ರವೀಣ್‌ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಸೆಕ್ಷನ್‌ಗಳಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಆರೋಪಿ ಗಳ ಬಂಧನಕ್ಕೆ ಶೋಧ ಮುಂದುವರಿದಿದೆ. ಘಟನೆ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿದ್ದು, ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಕೆಲವರು ರೌಡಿ ಶೀಟರ್‌ಗಳು
ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಎಸ್‌ ಪಿ ಸುಮನ್‌ ಡಿ. ಪನ್ನೇಕರ್‌ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರಕರಣದಲ್ಲಿ ಭಾಗಿದವರಲ್ಲಿ ಕೆಲವರು ರೌಡಿಶೀಟರ್‌ಗಳು ಎಂಬುದು ಗಮನಕ್ಕೆ ಬಂದಿದೆ. ಶಾಂತಿ ಕದಡಲು ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಸಂದರ್ಭ ಆರೋಪಿಯೊಬ್ಬನ ಗಡೀಪಾರಿಗೆ ಅದೇಶವಿತ್ತು ಎಂದು ತಿಳಿಸಿದರು.

ಡಿವೈಎಸ್‌ಪಿ ದಿನಕರ್‌ ಶೆಟ್ಟಿ, ಸಿಐ ನಂಜುಂಡೇ ಗೌಡ, ಎಸ್‌ಐ ಶಿವಶಂಕರ್‌ ಮತ್ತಿತರರು ಎಸ್‌ಪಿ ಜತೆಗಿದ್ದರು. ಕೆಎಸ್‌ಆರ್‌ಪಿ ತುಕಡಿ, ತಾಲೂಕಿನ ವಿವಿಧ ಠಾಣೆಗಳ ಅಧಿಕಾರಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

Advertisement

ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ: ದಂಪತಿ ವಿರುದ್ಧ ಕೇಸು ದಾಖಲು
ಸೋಮವಾರಪೇಟೆ: ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಂಜಾನ್‌ ಸಂದರ್ಭದ ಗಲಾಟ ಸಂಬಂಧಿಸಿ ವಿಚಾರಣೆ ನಡೆಸುತ್ತಿದ್ದ ಸಂದರ್ಭ, ಆರೋಪಿ ಕರೀಂ ಬೇಗ್‌ ಅಲಿಯಾಸ್‌ ಅಂಬು ಹಾಗೂ ಆತನ ಪತ್ನಿ ಶಾಹಿನಾ ಅವರು ಸಿಐ ನಂಜುಂಡೇ ಗೌಡರೊಡನೆ ವಾಗ್ವಾದ ನಡೆಸಿದರು. ಬಳಿಕ ಅವರ ಎದೆಗೆ ಕೈ ಹಾಕಿ ಎಳೆದು ಹಲ್ಲೆ ನಡೆಸಿದ ಪರಿಣಾಮ ಸಮವಸ್ತ್ರ ಹರಿದಿದೆ. ದಂಪತಿ ವಿರುದ್ಧ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next