Advertisement

ಕಲ್ಲು ಕುಸಿದು ತೋಡಿಗೆ: ಎರಡು ಮನೆಗಳಿಗೆ ಹಾನಿ

12:49 PM Jun 22, 2018 | Team Udayavani |

ಮಹಾನಗರ : ಕೆಲವು ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ ಗುರುವಾರ ಬೆಳಗ್ಗೆ ಕೊಟ್ಟಾರ ಬಳಿ ಲಲಿತ್‌ ಅವರಿಗೆ ಸೇರಿದ ಮನೆಯ ಬಳಿ ಕಲ್ಲು ಕುಸಿದಿದೆ. ಮನೆಯ ಬಳಿ ಇದ್ದ ತೋಡಿನ ಒಂದು ಬದಿಗೆ ಕಲ್ಲು ಕಟ್ಟಲಾಗಿತ್ತು. ಇದೀಗ ಕಲ್ಲು ಕುಸಿದು ತೋಡಿಗೆ ಬಿದ್ದಿದೆ. ಸುತ್ತಲಿನ ಎರಡು ಮನೆಗಳಿಗೆ ಹಾನಿಯಾಗಿದೆ.

Advertisement

ಅದರಂತೆಯೇ ನಗರದ ಬಂಟ್ಸ್‌ ಹಾಸ್ಟೆಲ್‌ ವೃತ್ತ, ಕೊಟ್ಟಾರ ಜಂಕ್ಷನ್‌ ಸಹಿತ ಕೆಲವೆಡೆ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ರಸ್ತೆಗೆ ನೀರು ಹೋಗಿ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಯಿತು.

ಟ್ರಾಫಿಕ್‌ ಜಾಮ್‌
ಮಳೆ ಮತ್ತು ರಸ್ತೆಗಳಲ್ಲಿ ಗುಂಡಿ ಬಿದ್ದ ಪರಿಣಾಮವಾಗಿ ನಗರದ ಜ್ಯೋತಿ ವೃತ್ತ, ಪಿವಿಎಸ್‌, ಪಂಪ್‌ವೆಲ್‌, ಕಂಕನಾಡಿ, ಬೊಜೈ, ನಂತೂರು ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಮಳೆಗೆ ಬಿಡುವು
ನಗರದಲ್ಲಿ ಗುರುವಾರ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ ಅನಂತರ ಮಳೆ ಸ್ವಲ್ಪ ಬಿಡುವು ನೀಡಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next