Advertisement
ಚಪಾತಿ, ರೊಟ್ಟಿ, ದೋಸೆಯ ಜೊತೆಗೂ ಜ್ಯಾಮ್ ಹಾಕುತ್ತಾರೆ. ಆದರೆ ಮಕ್ಕಳಿಗೆ ದಿನವೂ ಜ್ಯಾಮ್ ತಿನ್ನಿಸುವುದು ಒಳ್ಳೆಯದಲ್ಲ. ಯಾಕೆ ಗೊತ್ತಾ?
Related Articles
Advertisement
.ಒಂದು ಚಮಚ ಜ್ಯಾಮ್‌ನಲ್ಲಿ ಎರಡು ಚಮಚದಷ್ಟು ಸಕ್ಕರೆ ಇರುತ್ತದೆ. ಅಷ್ಟು ಪ್ರಮಾಣದ ಸಕ್ಕರೆ ದೇಹಕ್ಕೆ ಒಳ್ಳೆಯದಲ್ಲ.
.ಹೈ ಕ್ಯಾಲೋರಿ ಉಳ್ಳ ಜ್ಯಾಮ್ ಅನ್ನು ನಿತ್ಯವೂ ಸೇವಿಸುವ ಮಕ್ಕಳಲ್ಲಿ ಬೊಜ್ಜು ಹಾಗೂ ಅದರಿಂದ ಬರುವ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
.ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ, ಚೂರು ಜ್ಯಾಮ್ ತಿಂದರೂ ಮಕ್ಕಳ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ.
.ಜ್ಯಾಮ್ ಜೊತೆಗೆ ಎರಡು ಬ್ರೆಡ್, ಒಂದು ಚಪಾತಿ ತಿನ್ನುವಷ್ಟರಲ್ಲಿ ಮಕ್ಕಳ ಹೊಟ್ಟೆ ತುಂಬಿ, ಬೇರೇನೂ ಬೇಡ ಅಂದುಬಿಡುತ್ತಾರೆ. ಇದರಿಂದ ಮಕ್ಕಳ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ಹೋಗಬಹುದು.
ಜ್ಯಾಮ್ ಬದಲಿಗೆ?ಜೇನುತುಪ್ಪವನ್ನು ಬ್ರೆಡ್ ಜೊತೆ ಕೊಡಿ.
ಮನೆಯಲ್ಲೇ ಜ್ಯಾಮ್ ತಯಾರಿಸಬಹುದು.
ಎಲ್ಲ ತಿನಿಸಿಗೂ ಜ್ಯಾಮ್ ಸುರಿಯಬೇಡಿ.