ಬೆಂಗಳೂರು: ಬೈಕ್‌ನಲ್ಲಿ ಬಂದು ಮೊಬೈಲ್ ಕಸಿದುಕೊಂಡು ಡಿಸ್‌ಪ್ಲೇ ಕಳಚಿ 2-3 ಸಾವಿರ ರೂ. ಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯದ ಚರಣ್ (20), ನಂದಾ (21) ಬಂಧಿತರು. 1.60 ಲಕ್ಷ ರೂ. ಮೌಲ್ಯದ 8 ಮೊಬೈಲ್ ಗಳನ್ನು ಜಪ್ತಿ ಮಾಡಿದ್ದಾರೆ.
ನಗರದಲ್ಲಿ ಒಂಟಿಯಾಗಿ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಓಡಾಡುತ್ತಿರುವ ಮಹಿಳೆಯರು ಹಾಗೂ ಯುವಕರನ್ನು ಆರೋಪಿಗಳು ಹಿಂಬಾಲಿಸಿಕೊಂಡು ಹೋಗುತ್ತಿದ್ದರು. ಏಕಾಏಕಿ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕೂಡಲೇ ಮೊಬೈಲ್ ಸಿಮ್ ಕಾರ್ಡ್ ತೆಗೆಯುತ್ತಿದ್ದರು. ಬಳಿಕ ಡಿಸ್-ಪ್ಲೇ ಸಹ ತೆಗೆಯುತ್ತಿದ್ದರು. ನಗರದಲ್ಲಿರುವ ಕೆಲ ಮೊಬೈಲ್ ಅಂಗಡಿಗಳಿಗೆ ತೆರಳಿ ಕದ್ದ 15 ರಿಂದ 20 ಸಾವಿರ ರೂ. ಮೌಲ್ಯದ ಮೊಬೈಲ್‌ಗಳನ್ನು ಕೇವಲ 2 ರಿಂದ 3 ಸಾವಿರ ರೂ.ಗೆ ಮಾರಾಟ ಮಾಡು ತ್ತಿದ್ದರು. ಅಂಗಡಿ ಮಾಲೀಕರು ಈ ಮೊಬೈಲ್‌ಗಳಿಗೆ ಹೊಸ ಡಿಸ್-ಪ್ಲೇ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಕದ್ದ ಕೂಡಲೇ ಸಿಮ್ ಕಾರ್ಡ್ ತೆಗೆದು ಮೊಬೈಲ್ ಸ್ವಿಚ್xಆಫ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಸುಳಿವು ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿತ್ತು.
ಸಿಕ್ಕಿ ಬಿದ್ದಿದ್ದು ಹೇಗೆ?: ಕಾಮಾಕ್ಷಿಪಾಳ್ಯದ ಕೃಷ್ಣ ನಂದಕರ್ ಜು.14ರಂದು 20 ಸಾವಿರ ರೂ. ಮೌಲ್ಯದ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಮನೆಗೆ ಹೋಗು ತ್ತಿದ್ದರು. ಆ ವೇಳೆ ಇವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಮೊಬೈಲ್ ಕಸಿದುಕೊಂಡು ಪರಾರಿ ಯಾಗಿದ್ದರು. ಇತ್ತ ಕೃಷ್ಣನಂದಕರ್ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಕೃತ್ಯ ನಡೆದ ಆಸು-ಪಾಸಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿ, ಕೆಲ ತಾಂತ್ರಿಕ ಕಾರ್ಯಾ ಚರಣೆ ನಡೆಸಿದ್ದರು. ಆ ವೇಳೆ ಆರೋಪಿಗಳ ಸುಳಿವು ಸಿಕ್ಕಿತ್ತು. ಈ ಹಿಂದೆಯೂ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿ ಆರೋಪಿಗಳು ಜೈಲು ಸೇರಿದ್ದರು. ಈ ಆಧಾರದಲ್ಲಿ ಅವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಮೊಬೈಲ್ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕದ್ದ ಮೊಬೈಲ್‌ಗಳಿಗೆ ಇತ್ತೀಚೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳಿಂದ ಕಡಿಮೆ ಬೆಲೆಗೆ ಕದ್ದ ಮೊಬೈಲ್‌ಗಳನ್ನು ಕೆಲ ಮೊಬೈಲ್ ಅಂಗಡಿಗಳಲ್ಲಿ ಖರೀದಿಸುತ್ತಿದ್ದರು. ಆರೋಪಿಗಳು ಮೊಬೈಲ್ ಡಿಸ್-ಪ್ಲೇ ಕಳಚಿ ಕೊಟ್ಟರೆ ಅಂಗಡಿ ಮಾಲೀಕರು ಅದೇ ಮೊಬೈಲ್‌ಗೆ ಹೊಸ ಡಿಸ್‌ಪ್ಲೇ ಅಳವಡಿಸುತ್ತಿದ್ದ ಹಿನ್ನೆಲೆಯಲ್ಲಿ ಕದ್ದ ಮೊಬೈಲ್ ಎಂಬುದು ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ