ಮುಂಬೈ:ಬ್ರಿಟನ್ ನಲ್ಲಿ ಹೊಸ ವಂಶವಾಹಿನಿಯ ನೂತನ ಕೋವಿಡ್ ಸೋಂಕು ಕ್ಷಿಪ್ರವಾಗಿ ಹರಡುತ್ತಿದೆ ಎಂಬ ಆತಂಕ ಜಾಗತಿಕ ಶೇರುಮಾರುಕಟ್ಟೆ ಮೇಲೆ ಬಿದ್ದಿದ್ದು, ಇದರ ಪರಿಣಾಮ ಮುಂಬೈ ಷೇರುಪೇಟೆ ಮೇಲೆಯೂ ಬಿದ್ದಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿರುವುದಾಗಿ ವರದಿ ತಿಳಿಸಿದೆ.
ಸೋಮವಾರ(ಡಿಸೆಂಬರ್ 21, 2020) ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನಾಂತ್ಯಕ್ಕೆ ಬರೋಬ್ಬರಿ 1,406.73 ಅಂಕಗಳಷ್ಟು ಕುಸಿತ ಕಾಣುವ ಮೂಲಕ 45,553.96 ಅಂಕಗಳ ವಹಿವಾಟಿನೊಂದಿಗೆ ಮುಕ್ತಾಯ ಕಂಡಿದೆ.
ಅದೇ ರೀತಿ ನಿಫ್ಟಿ ಕೂಡಾ 432.15 ಅಂಕಗಳಷ್ಟು ಇಳಿಕೆ ಕಂಡಿದ್ದು, 13,328.40 ಅಂಕಗಳ ದಿನಾಂತ್ಯದ ವಹಿವಾಟಿನೊಂದಿಗೆ ಅಂತ್ಯಕಂಡಿದೆ. ಇಂಡಸ್ ಲ್ಯಾಂಡ್ ಬ್ಯಾಂಕ್, ಮಹೇಂದ್ರ ಆ್ಯಂಡ್ ಮಹೇಂದ್ರ, ಎಸ್ ಬಿಐ, ಎನ್ ಟಿಪಿಸಿ, ಐಟಿಸಿ, ಆ್ಯಕ್ಸಿಸ್ ಬ್ಯಾಂಕ್ ಸೇರಿದಂತೆ ಹಲವು ಪ್ರಮುಖ ಶೇರುಗಳು ಭಾರೀ ಕುಸಿತ ಕಂಡಿದ್ದವು.
ಇದನ್ನೂ ಓದಿ:ಟ್ರ್ಯಾಕ್ಟರ್ ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ 6 ಮಂದಿ ಸಾವು, 8 ಮಂದಿ ಗಂಭೀರ
ಇಂದು ದೇಶೀಯ ಷೇರುಗಳು ಮಾರಾಟವಾಗಲು ತೀವ್ರ ಒತ್ತಡ ಎದುರಿಸಿದ್ದಲ್ಲದೇ, ಇದರಿಂದಾಗಿ ಹೂಡಿಕೆದಾರರ 7 ಟ್ರಿಲಿಯನ್ ಗೂ ಅಧಿಕ ಸಂಪತ್ತು ಒಂದೇ ದಿನದಲ್ಲಿ ನಷ್ಟವಾಗಿರುವುದಾಗಿ ರಿಲಯನ್ಸ್ ಸೆಕ್ಯುರಿಟೀಸ್ ಸ್ಟ್ರೆಟಜಿ ಬಿನೋದ್ ಮೋದಿ ತಿಳಿಸಿದ್ದಾರೆ.