ಮುಂಬೈ: ಜಾಗತಿಕ ಷೇರು ಮಾರುಕಟ್ಟೆ ಹಾಗೂ ರಾಷ್ಟ್ರರಾಜಕಾರಣದ ಬೆಳವಣಿಗೆ ನಡುವೆ ಗುರುವಾರ (ಜೂನ್ 06) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 600ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಇದನ್ನೂ ಓದಿ:ʼಕೋಟಿʼ ಸಿನ್ಮಾ ಹಿಟ್ ಆದ್ಮೇಲೆ ಮದುವೆ ಆಗ್ತೀನಿ.. ಮದುವೆ ಬಗ್ಗೆ ಮೌನ ಮುರಿದ ಡಾಲಿ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 692.27 ಅಂಕಗಳ ಜಿಗಿತದೊಂದಿಗೆ 75,074.51 ಅಂಕಗಳ ಮಟ್ಟದಲ್ಲಿ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ನಿಫ್ಟಿ 201.10 ಅಂಕಗಳ ಏರಿಕೆಯೊಂದಿಗೆ 22,821.40 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯ ಪರಿಣಾಮ ಎಚ್ ಸಿಎಲ್ ಟೆಕ್ನಾಲಜೀಸ್, ಶ್ರೀರಾಮ್ ಫೈನಾನ್ಸ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಟೆಕ್ ಮಹೀಂದ್ರ ಮತ್ತು ಎಸ್ ಬಿಐ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಹಿಂಡಲ್ಕೋ ಇಂಡಸ್ಟ್ರೀಸ್, ಎಚ್ ಯುಎಲ್, ಏಷಿಯನ್ ಪೇಂಟ್ಸ್, ಹೀರೋ ಮೋಟೊ ಕಾರ್ಪ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ನಷ್ಟ ಕಂಡಿದ್ದು, ಹೂಡಿಕೆದಾರರು ಕೈ ಸುಟ್ಟುಕೊಳ್ಳುವಂತಾಗಿದೆ.
ಫಾರ್ಮಾ ಮತ್ತು ಎಫ್ ಎಂಸಿಜಿ ಹೊರತುಪಡಿಸಿ ಇನ್ನುಳಿದಂತೆ ಪಿಎಸ್ ಯು ಬ್ಯಾಂಕ್, ಐಟಿ, ರಿಯಲ್ಟಿ ಕ್ಷೇತ್ರದ ಷೇರುಗಳು ಶೇ.3ರಿಂದ 5ರಷ್ಟು ಲಾಭ ಗಳಿಸಿದೆ ಎಂದು ಮಾರುಕಟ್ಟೆ ವರದಿ ತಿಳಿಸಿದೆ.