Advertisement

ಮತ್ತೆ ಭಾರೀ ಏರಿಕೆ ಕಂಡ ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ

08:57 AM Sep 24, 2019 | Team Udayavani |

ಮುಂಬೈ: ದೇಶೀಯ ಕಾರ್ಪೋರೇಟ್ ಕಂಪನಿಗಳ ತೆರಿಗೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡಿದ ಪರಿಣಾಮ ಮುಂಬೈ ಶೇರು ಮಾರುಕಟ್ಟೆಯಲ್ಲಿ ಸೋಮವಾರದ ವಹಿವಾಟು ಭರ್ಜರಿಯಾಗಿ ನಡೆದಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 1,045.98 ಅಂಕಗಳ ಭಾರೀ ಏರಿಕೆಯೊಂದಿಗೆ 39,060.60 ಅಂಕಗಳ ವಹಿವಾಟು ನಡೆಯುತ್ತಿದೆ.

Advertisement

ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ (ಎನ್ ಎಸ್ ಇ) 295.45 ಅಂಕಗಳ ಏರಿಕೆಯೊಂದಿಗೆ 11,569.65 ಅಂಕಗಳೊಂದಿಗೆ ವಹಿವಾಟು ಆರಂಭಗೊಂಡಿದೆ.

ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೋರೇಟ್ ತೆರಿಗೆ ಕಡಿತಗೊಳಿಸಿ ಘೋಷಿಸಿದ ಬೆನ್ನಲ್ಲೇ ಮುಂಬೈ ಚಿನಿವಾರ ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 1900 ಅಂಕಗಳ ಭಾರೀ ಏರಿಕೆಯೊಂದಿಗೆ 37,990.47 ಅಂಕಗಳ ವಹಿವಾಟು ನಡೆಸಿತ್ತು.

ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 551.35 ಅಂಕಗಳ ಏರಿಕೆಯೊಂದಿಗೆ 11,256.15 ಅಂಕಗಳ ವಹಿವಾಟು ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next