ಮುಂಬಯಿ: ಸತತವಾಗಿ ಪತನ ಕಾಣುತ್ತಿದ್ದ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮಂಗಳವಾರ (ಜನವರಿ 25) 367 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯ ಕಂಡಿದೆ. ಇದರ ಪರಿಣಾಮ ಮಾರುತಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಎಸ್ ಬಿಐ ಷೇರುಗಳು ಭಾರೀ ಲಾಭಗಳಿಸಿದೆ.
ಇದನ್ನೂ ಓದಿ:ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯದಲ್ಲೇ ಪ್ರಥಮ ವಾರ್ ರೂಮ್ ಗಂಗಾವತಿ ಆರಂಭ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 366.64 ಅಂಕಗಳಷ್ಟು ಏರಿಕೆಯಾಗಿದ್ದು, 57,858.15 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 128.85 ಅಂಕ ಏರಿಕೆಯಾಗಿದ್ದು, 17,277.95 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಇಂಡಸ್ ಇಂಡ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ, ಎನ್ ಟಿಪಿಸಿ ಷೇರುಗಳ ಮೌಲ್ಯ ಶೇ.7ರಷ್ಟು ಲಾಭಗಳಿಸಿದೆ. ಅಲ್ಲದೇ ಯುಪಿಎಲ್, ಕೋಲ್ ಇಂಡಿಯಾ, ಬಜಾಜ್ ಆಟೋ, ಬಿಪಿಸಿಎಲ್, ಟಾಟಾ ಮೋಟಾರ್ಸ್, ಪವರ್ ಗ್ರಿಡ್ ಕಾರ್ಪೋರೇಶನ್, ಎನ್ ಟಿಪಿಸಿ, ಎಚ್ ಯುಎಲ್, ಸಿಪ್ಲಾ, ಜೆಎಸ್ ಡಬ್ಲ್ಯು ಸ್ಟೀಲ್, ಈಚರ್ ಮೋಟಾರ್ಸ್, ಕೋಟಕ್ ಮಹೀಂದ್ರ, ಅದಾನಿ ಪೋರ್ಟ್ಸ್, ಐಟಿಸಿ, ಐಒಸಿ, ಸನ್ ಫಾರ್ಮಾ ಷೇರುಗಳು ಲಾಭ ಕಂಡಿದೆ.
ಮತ್ತೊಂದೆಡೆ ವಿಪ್ರೋ, ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿದೆ.
ಜಾಗತಿಕವಾಗಿ ಹಾಂಗ್ ಕಾಂಗ್, ಶಾಂಘೈ, ಟೋಕಿಯೋ ಮತ್ತು ಸಿಯೋಲ್ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಕುಸಿತ ಕಂಡಿದೆ. ಯುರೋಪ್ ನಲ್ಲಿ ಷೇರುಮಾರುಕಟ್ಟೆಯ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.