Advertisement
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1,533.11 ಅಂಕಗಳಷ್ಟು ಕುಸಿತ ಕಂಡಿದ್ದು 79,448.84 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 463.50 ಅಂಕ ಕುಸಿತವಾಗಿದ್ದು, 24,254.20 ಅಂಕಕ್ಕೆ ಇಳಿಕೆಯಾಗಿದೆ.
Related Articles
ಜಾಗತಿಕವಾಗಿ ಹೂಡಿಕೆದಾರರು ಮಧ್ಯ ಏಷ್ಯಾದ ಬೆಳವಣಿಗೆಯನ್ನು ಕೂಡಾ ಗಮನಿಸುತ್ತಿದ್ದು, ಇಸ್ರೇಲ್, ಹಮಾಸ್ ಯುದ್ಧ, ಹಮಾಸ್ ಮುಖಂಡನ ಹತ್ಯೆ, ಬಾಂಗ್ಲಾ ದಳ್ಳುರಿ, ಫ್ರಾನ್ಸ್ ರಾಜಕೀಯ ಅಸ್ಥಿರತೆ ಜಾಗತಿಕ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ವರದಿ ತಿಳಿಸಿದೆ. ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಅದಾನಿ ಪೋರ್ಟ್ಸ್, ಮಾರುತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿವೆ. ಮತ್ತೊಂದೆಡೆ ಸನ್ ಫಾರ್ಮಾ, ಯುನಿಲಿವರ್ ಲಾಭಗಳಿಸಿದೆ.Advertisement2,300 ಅಂಕಗಳ ಕುಸಿತದ ಪರಿಣಾಮ ಹೂಡಿಕೆದಾರರಿಗೆ ಬರೋಬ್ಬರಿ 18 ಲಕ್ಷ ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದೆ. ಸೂಚ್ಯಂಕ ಭಾರೀ ಕುಸಿತದಿಂದಾಗಿ ಷೇರುಪೇಟೆ ಮೌಲ್ಯ 457.16 ಲಕ್ಷ ಕೋಟಿಯಿಂದ 443.29 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.