Advertisement
ಇನ್ನು, ಯುದ್ಧದ ಕಾರ್ಮೋಡವು ಜಾಗತಿಕ ಷೇರು ಮಾರುಕಟ್ಟೆ ಮೇಲೂ ಪ್ರಭಾವ ಬೀರಿದೆ. ಅಮೆರಿಕದ ನಾಸಾxಕ್ ಶೇ.1 ಕುಸಿತ ಅನುಭವಿಸಿದೆ. ಟೋಕಿಯೊ, ಸಿಡ್ನಿ ಷೇರು ಮಾರುಕಟ್ಟೆಗಳೂ ಪತನಗೊಂಡಿವೆ. ರಕ್ಷಣ ಕ್ಷೇತ್ರದ ಷೇರುಗಳು ಮಾತ್ರ ಚೇತರಿಸಿಕೊಂಡಿವೆ. ನಾರ್ತ್‌ರಾಪ್ ಗ್ರಮ್ಮನ್ ಶೇ.3, ಲಾಕ್‌ಹೀಡ್ ಮಾರ್ಟಿನ್ ಶೇ.3.6 ಸೇರಿದಂತೆ ರಕ್ಷಣ ವಲಯದ ಕಂಪೆನಿಗಳ ಷೇರು ಮೌಲ್ಯ ಹೆಚ್ಚಳವಾಗಿವೆ.
Related Articles
Advertisement
ಎಚ್ಚರಿಕೆಯಿಂದಿರಿ: ನಾಗರಿಕರಿಗೆ ಭಾರತ ಸೂಚನೆ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮನೆ ಮಾಡಿರುವಂತೆಯೇ ಎಚ್ಚರಿಕೆಯಿಂದಿರುವಂತೆ ಭಾರತೀಯ ನಾಗರಿಕರಿಗೆ ಕೇಂದ್ರ ಸರಕಾರ ಸೂಚಿಸಿದೆ. ಇರಾನ್‌ಗೆ ಅನಗತ್ಯವಾಗಿ ಪ್ರಯಾಣಿಸಬೇಡಿ. ಟೆಹರಾ ನ್‌ನಲ್ಲಿರುವ ಭಾರತೀಯರು ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ. ಇದೇ ವೇಳೆ, ಇಸ್ರೇಲ್‌ನಲ್ಲಿರುವ ಭಾರತೀಯರೂ ಸರಕಾರದ ಸುರಕ್ಷ ಕ್ರಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಅನಗತ್ಯವಾಗಿ ಹೊರಗೆ ಹೋಗದಂತೆ ತಿಳಿಸಿದೆ.
ಎಲ್ಲರೂ ಶಾಂತಿ ಕಾಪಾಡಿ: ಭಾರತ ಕರೆ
ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಭಾರತ ಸರಕಾರ, “ಪಶ್ಚಿಮ ಏಷ್ಯಾದ ಪರಿಸ್ಥಿತಿ ಕಳವಳಕಾರಿಯಾಗಿದೆ. ಈ ಸಂಘರ್ಷವು ಮತ್ತಷ್ಟು ವಿಸ್ತರಣೆಯಾಗದಂತೆ ನೋಡಿಕೊಳ್ಳಿ. ಎಲ್ಲ ಕಡೆಯವರೂ ಶಾಂತಿ ಕಾಪಾಡಿ. ಮಾತುಕತೆ, ರಾಜತಾಂತ್ರಿಕತೆ ಮೂಲಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಿ’ ಎಂದಿದೆ.