Advertisement

ದಾಖಲೆ ವಹಿವಾಟು; ಸೆನ್ಸೆಕ್ಸ್ ಸೂಚ್ಯಂಕ 590 ಅಂಕ ಏರಿಕೆ, ನಿಫ್ಟಿ 15,090ರ ಗಡಿಗೆ

11:07 AM Feb 08, 2021 | Team Udayavani |

ನವದೆಹಲಿ: ಬಾಂಬೆ ಷೇರುಪೇಟೆ ಸೋಮವಾರ ಆರಂಭಿಕ ಹಂತದಲ್ಲಿ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಭರ್ಜರಿ ಏರಿಕೆಯ ವಹಿವಾಟಿನೊಂದಿಗೆ ದಾಖಲೆಯ ಗಡಿ ತಲುಪಿದೆ.

Advertisement

ಇದನ್ನೂ ಓದಿ:ತಪ್ಪು ಮಾಹಿತಿ ಹರಡುತ್ತಿರುವ ಖಲಿಸ್ತಾನಿ ಖಾತೆಗಳನ್ನು ತೆಗೆಯಿರಿ : ಟ್ವೀಟರ್ ಗೆ ಕೇಂದ್ರ ಮನವಿ

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 589.45 ಅಂಕಗಳಷ್ಟು ಏರಿಕೆಯಾಗಿದ್ದು 51, 321.08 ಅಂಕಗಳಷ್ಟು ವಹಿವಾಟು ನಡೆಸಿದೆ. ಮತ್ತೊಂದೆಡೆ ಎನ್ ಎಸ್ ಇ ನಿಫ್ಟಿ 167.20 ಅಂಕಗಳಗೊಂದಿಗೆ 15,091.45ರ ದಾಖಲೆಯ ಗಡಿ ಮುಟ್ಟಿದೆ.

ಷೇರುಪೇಟೆ ಸೆನ್ಸೆಕ್ಸ್ ಏರಿಕೆಯಿಂದ ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಆ್ಯಕ್ಸಿಸ್ ಬ್ಯಾಂಕ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್, ಒಎನ್ ಜಿಸಿ, ಇಂಡಸ್ ಇಂಡ್ ಬ್ಯಾಂಕ್, ಪವರ್ ಗ್ರಿಡ್, ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಭಾರ್ತಿ ಏರ್ ಟೆಲ್, ಎಲ್ ಆ್ಯಂಡ್ ಟಿ, ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಶೇ.9.22ರಷ್ಟು ಲಾಭ ಗಳಿಸಿವೆ. ಏತನ್ಮಧ್ಯೆ ಎನ್ ಟಿಪಿಸಿ, ಬಜಾಜ್ ಆಟೋ ಮತ್ತು ಆಲ್ಟ್ರಾ ಟೆಕ್ ಷೇರುಗಳು ನಷ್ಟ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next