ಮುಂಬೈ: ಜಾಗತಿಕ ಷೇರುಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಹಿನ್ನೆಲೆಯಲ್ಲಿ ಗುರುವಾರ (ಜೂನ್ 13) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:Tumkur: ಕಲುಷಿತ ನೀರು ಕುಡಿದು ಮತ್ತಿಬ್ಬರು ಸಾವು; ಮೃತರ ಸಂಖ್ಯೆ ಮೂರಕ್ಕೆ ಏರಿಕೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 348 ಅಂಕಗಳ ಏರಿಕೆಯೊಂಧಿಗೆ 76,954.15 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 110 ಅಂಕಗಳ ಜಿಗಿತದೊಂದಿಗೆ 23,433.10ಅಂಕಗಳ ಗಡಿ ತಲುಪಿದೆ.
ಬುಧವಾರದ ವಹಿವಾಟಿನಲ್ಲಿ ನಿಫ್ಟಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿತ್ತು. ಗುರುವಾರ ಅಮೆರಿಕದ ಫೆಡರಿಲ್ ರಿಸರ್ವ್ ಪಾಲಿಸಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಧನಾತ್ಮಕ ವಹಿವಾಟು ಮುಂದುವರಿದಿದೆ.
ಷೇರುಪೇಟೆಯ ಸಂವೇದಿ ಸೂಚ್ಯಂಕ ದೀರ್ಘಕಾಲ ಏರಿಕೆಯೊಂದಿಗೆ ಮುಂದುವರಿಯಲಿದೆ ಎಂಬುದು ನಿರೀಕ್ಷಿಸುವಂತಿಲ್ಲ. ಯಾವ ಸಮಯದಲ್ಲೂ ಭಾರೀ ಕುಸಿತ ಕಾಣಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂದು ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ನ ನಾಗರಾಜ್ ಶೆಟ್ಟಿ ಎಕಾನಾಮಿಕ್ಸ್ ಟೈಮ್ಸ್ ಜತೆ ಮಾತನಾಡುತ್ತ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.