ಮುಂಬೈ: ಬಾಂಬೆ ಷೇರುಪೇಟೆಯ ಇಂಡೆಕ್ಸ್ ಭಾರೀ ಪ್ರಮಾಣದಲ್ಲಿ ಏರಿಕೆ ಕಾಣುವ ಮೂಲಕ ದಾಖಲೆ ಬರೆದಿದ್ದು, ಮಂಗಳವಾರ (ಜನವರಿ 02)ದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಇಳಿಕೆ ಕಂಡಿದೆ.
ಇದನ್ನೂ ಓದಿ:Ram Mandir ಲೋಕಾರ್ಪಣೆಗೆ ನನಗೂ ಆಹ್ವಾನವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 504.87 ಅಂಕ ಇಳಿಕೆಯೊಂದಿಗೆ ವಹಿವಾಟು ನಡೆದಿದ್ದು, 71,767.07 ಅಂಕಕ್ಕೆ ಕುಸಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 132.90 ಅಂಕ ಇಳಿಕೆಯಾಗಿದ್ದು, 21,609 ಅಂಕ ತಲುಪಿದೆ.
ಏಷ್ಯನ್ ಮಾರ್ಕೆಟ್ ನಲ್ಲಿ ಚೀನಾದ ಮಿಶ್ರ ಆರ್ಥಿಕ ಅಂಕಿಅಂಶ, ಅಮೆರಿಕದ ಷೇರುಪೇಟೆ ಸೋಮವಾರ ಹೊಸ ವರ್ಷದ ಪ್ರಯುಕ್ತ ರಜೆ ಘೋಷಿಸಲಾಗಿತ್ತು. ಫೆಡರಲ್ ರಿಸರ್ವ್ ದ ಬಡ್ಡಿದರ ಅನಿಶ್ಚಿತತೆ, ಆರ್ಥಿಕ ಹಿಂಜರಿಕೆ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗಿದೆ.
ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತದ ನಡುವೆಯೂ ಆಲ್ ಕಾರ್ಗೋ, ಎಂಒಎಲ್, ಲೇಮನ್ ಟ್ರೀ, ಸ್ಪಾರ್ಕ್, ಪಿಟಿಸಿಐಎಲ್ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಎನ್ ಎಲ್ ಸಿ ಇಂಡಿಯಾ, ಲೋಧಾ, ಟೀಮ್ ಲೀಸ್, ಟಿವಿಎಸ್ ಮೋಟಾರ್ಸ್, ಮಹೀಂದ್ರಾ & ಮಹೀಂದ್ರಾ, ಅಶೋಕ್ ಲೇಲ್ಯಾಂಡ್, ಷೇರುಗಳು ನಷ್ಟ ಕಂಡಿವೆ.