ಮುಂಬೈ: ಜಾಗತಿಕ ಷೇರು ಮಾರುಕಟ್ಟೆಯ ವಹಿವಾಟು ಹಾಗೂ ಮುಂಬರುವ ಅಮೆರಿಕದ ಹಣದುಬ್ಬರ ವರದಿಯ ಪರಿಣಾಮ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ (ಮಾರ್ಚ್ 28) ಒಂದು ಸಾವಿರ ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದೆ.
ಇದನ್ನೂ ಓದಿ:Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,000 ಅಂಕಗಳ ಏರಿಕೆಯೊಂದಿಗೆ 74,000 ಅಂಕಗಳ ಗಡಿ ದಾಟಿ ದಾಖಲೆ ನಿರ್ಮಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 50 ಅಂಕಗಳ ಏರಿಕೆಯೊಂದಿಗೆ 22,400ಕ್ಕೂ ಅಧಿಕ ಅಂಕಗಳ ಮಟ್ಟ ತಲುಪಿತ್ತು.
2024ರ ಆರ್ಥಿಕ ವರ್ಷದ ಕೊನೆಯ ವಹಿವಾಟಿನ ದಿನವಾದ ಬ್ಯಾಂಕಿಂಗ್ ಮತ್ತು ಫೈನಾಶ್ಶಿಯಲ್ ಕ್ಷೇತ್ರದ ಷೇರುಗಳು ಭಾರೀ ಪ್ರಮಾಣದಲ್ಲಿ ವಹಿವಾಟು ಕಂಡಿದೆ.
ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ವಿಪ್ರೋ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ಮಾರುತಿ ಸುಜುಕಿ, ಎಚ್ ಸಿಎಲ್ ಟೆಕ್, ಟೈಟಾನ್, ಟೆಕ್ ಮಹೀಂದ್ರ ಮತ್ತು ಏಷಿಯನ್ ಪೇಂಟ್ಸ್ ಷೇರುಗಳು ಆರಂಭಿಕ ವಹಿವಾಟಿನಲ್ಲಿ ನಷ್ಟ ಕಂಡಿವೆ.
ಛತ್ತೀಸ್ ಗಢದಲ್ಲಿರುವ ಅದಾನಿ ಧರ್ಮಲ್ ಪವರ್ ಪ್ಲ್ಯಾಂಟ್ ನಿಂದ 4,000 ಕೋಟಿ ರೂಪಾಯಿ ಮೊತ್ತದ ಖರೀದಿ ಆರ್ಡರ್ ಬಂದ ಹಿನ್ನೆಲೆಯಲ್ಲಿ ಬಿಎಚ್ ಇಎಲ್ ಷೇರು ಶೇ.4.6 ರಷ್ಟು ಏರಿಕೆ ಕಂಡಿದೆ.
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 3ಗಂಟೆ ವೇಳೆಗೆ 5,05 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆದಿದ್ದು, 73,492.03 ಅಂಕಗಳ ಮಟ್ಟ ತಲುಪಿದೆ.