ಮುಂಬೈ: ಷೇರುಪೇಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆ*ಕ್ಸ್ ಶುಕ್ರವಾರ (ಸೆ.20) 1,300ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆಯಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 1,359.52 ಅಂಕ ಏರಿಕೆಯಾಗಿದ್ದು, 84,544.31 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 250.75 ಅಂಕಗಳ ಜಿಗಿತದೊಂದಿಗೆ ದಾಖಲೆಯ 25,666.55 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಜಾಗತಿಕ ವಹಿವಾಟಿನ ಬೆಳವಣಿಗೆ ಪರಿಣಾಮ ದೇಶಿ ಷೇರುಪೇಟೆ ವಹಿವಾಟು ಭರ್ಜರಿ ಏರಿಕೆ ಕಂಡಿದ್ದು, ಇನ್ನುಳಿದಂತೆ ಹಾಂಗ್ ಕಾಂಗ್, ಜಪಾನ್, ಕೊರಿಯಾ ಷೇರುಪೇಟೆ ಸೂಚ್ಯಂಕ ಏರಿಕೆಯೊಂದಿಗೆ ವಹಿವಾಟು ಕೊನೆಗೊಂಡಿದೆ.
ಷೇರುಪೇಟೆ ಸೂಚ್ಯಂಕ ಮತ್ತು ನಿಫ್ಟಿ ಭರ್ಜರಿ ಏರಿಕೆಯಿಂದಾಗಿ ಹೂಡಿಕೆದಾರರ ಆದಾಯ ಸುಮಾರು 6 ಲಕ್ಷ ಕೋಟಿ ರೂಪಾಯಿ ಲಾಭವಾಗಿರುವುದಾಗಿ ಮಾರುಕಟ್ಟೆ ವರದಿ ತಿಳಿಸಿದೆ.