ಮುಂಬೈ: ಕೋವಿಡ್ 19 ಮಹಾಮಾರಿ ಜಾಗತಿಕವಾಗಿ ಕ್ಷಿಪ್ರವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ಗುರುವಾರವೂ ಮುಂಬೈ ಶೇರುಮಾರುಕಟ್ಟೆ ವಹಿವಾಟಿಗೆ ಮತ್ತಷ್ಟು ಬಿಸಿ ತಟ್ಟಿದೆ.
ಶೇರುಪೇಟೆ ವಹಿವಾಟು ಆರಂಭಗೊಳ್ಳುತ್ತಿದ್ದಂತೆಯೇ ಶೇರು ಸೂಚ್ಯಂಕ ಹಾಗೂ ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 10ಗಂಟೆ ವಹಿವಾಟಿನಲ್ಲಿ ಬರೋಬ್ಬರಿ 1900 ಅಂಕಗಳಷ್ಟು ಕುಸಿತ ಕಂಡಿದ್ದು 26,977 ಅಂಕಗಳ ವಹಿವಾಟಿಗೆ ಸಾಕ್ಷಿಯಾಗಿದೆ.
9.30ರ ಆರಂಭಿಕ ವಹಿವಾಟಿನಲ್ಲಿ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 1,785.28 ಅಂಕಗಳಷ್ಟು ಕುಸಿತ ಕಂಡಿದ್ದು, 27,084.23 ಅಂಕಗಳ ವಹಿವಾಟು ನಡೆದಿತ್ತು.
ರಾಷ್ಟ್ರೀಯ ಶೇರುಮಾರುಕಟ್ಟೆ ನಿಫ್ಟಿ ಸೂಚ್ಯಂಕ ಮತ್ತೆ 600 ಅಂಕಗಳಷ್ಟು ಕುಸಿತ ಕಾಣುವ ಮೂಲಕ ಕಳೆದ 37 ತಿಂಗಳಲ್ಲಿ ದಾಖಲೆಯ 8000ಕ್ಕಿಂತ ಕಡಿಮೆ ಅಂಕಗಳ ಕುಸಿತ ಕಂಡಿದೆ. ಇದರಿಂದಾಗಿ ಹನ್ನೊಂದು ಸೆಕ್ಟರ್ ಗಳ ಮೇಲೆ ಭಾರೀ ಹೊಡತ ಬಿದ್ದಂತಾಗಿದೆ.
ಭಾರ್ತಿ ಇನ್ಪ್ರಾಟೆಲ್, ಬಜಾಜ್ ಫೈನಾನ್ಸ್, ಭಾರತ್ ಪೆಟ್ರೋಲಿಯಂ, ಇಂಡಸ್ ಲ್ಯಾಂಡ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಶೇರುಗಳು ಶೇ.12ರಿಂದ. ಶೇ.17ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.