ಮುಂಬೈ: ಜಾಗತಿಕ ವಿದ್ಯಮಾನಗಳ ನಡುವೆ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ (ಆ.26) 560ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 564.01 ಅಂಕಗಳ ಜಿಗಿತದೊಂದಿಗೆ 81,650.22 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 161.60 ಅಂಕಗಳ ಏರಿಕೆಯೊಂದಿಗೆ 24,984.80 ಅಂಕಗಳ ಗಡಿ ತಲುಪಿದೆ.
ಸೂಚ್ಯಂಕ, ನಿಫ್ಟಿ ಏರಿಕೆಯೊಂದಿಗೆ ಟಿಸಿಎಸ್, ಬಜಾಜ್ ಫಿನ್ ಸರ್ವ್, ಟೆಕ್ ಮಹೀಂದ್ರ, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಸಿಎಲ್ ಟೆಕ್ ಮತ್ತು ಪವರ್ ಗ್ರಿಡ್ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:Ravi Katapadi: ಈ ಬಾರಿ ‘ಅವತಾರ್ 2’ ವೇಷಧಾರಿಯಾಗಿ ಬರಲಿದ್ದಾರೆ ರವಿ ಕಟಪಾಡಿ…
ಅದಾನಿ ಪೋರ್ಟ್ಸ್ SEZ, ಆಲ್ಟ್ರಾ ಟೆಕ್ ಸಿಮೆಂಟ್, ಸನ್ ಫಾರ್ಮಾ, ಐಟಿಸಿ, ಎಚ್ ಯುಎಲ್ ಮತ್ತು ಏಷಿಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ.
ಅಮೆರಿಕದ ಷೇರುಪೇಟೆ ವಹಿವಾಟು ಲಾಭದತ್ತ ಮುನ್ನಡೆಯಲಿದೆ ಎಂಬ ನಿರೀಕ್ಷೆ ಭಾರತೀಯ ಷೇರುಪೇಟೆಯದ್ದಾಗಿದೆ. ಜಪಾನ್ ನ Topix ಷೇರು ಶೇ.0.8ರಷ್ಟು ಕುಸಿತ ಕಂಡಿದೆ.