Advertisement
ಕೊತ್ತನೂರಿನ ಸ್ಟೀಫನ್ ಜೋನ್ಸ್ (35), ಕಲ್ಕೆರೆ ರಾಘವೇಂದ್ರ (34) ವಿದ್ಯಾರಣ್ಯಪುರದ ಮಂಜುನಾಥ್ ( 35) ಬಂಧಿತರು. ಆರೋಪಿಗಳಿಂದ ದುಬಾರಿ ಮೌಲ್ಯದ ಮೂರು ಐಶಾರಾಮಿ ಕಾರುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಮೂವರು ಆರೋಪಿಗಳ ಈ ಬೃಹತ್ ವಂಚನೆಯಲ್ಲಿ ನೂರು ಕೋಟಿ ರೂ. ಗಳಿಗೂ ಅಧಿಕ ವಂಚನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
Related Articles
Advertisement
ಪರಿಚಯಸ್ಥ ಟೆಕ್ಕಿಗಳಿಗೆ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ವಿವರಣೆ ನೀಡಿ ಶೇ.10, 15ರಷ್ಟು ಲಾಭಾಂಶ ನೀಡುವುದಾಗಿ ನಂಬಿಸುತ್ತಿದ್ದರು. ಅವರ ಬಳಿ ಕೆಲವು ಲಕ್ಷಗಟ್ಟಲೆ ಹಣ ಕಟ್ಟಿಸಿಕೊಳ್ಳುತ್ತಿದ್ದರು.
ಒಂದು ವೇಳೆ ಅವರು ಹಣವಿಲ್ಲ ಎಂದಾದರೆ ವೇತನದ ಮೇಲೆ ಬ್ಯಾಂಕ್‌ನಲ್ಲಿ ಸಾಲ ಮಾಡಿ ನಮಗೆ ನೀಡಿ. ನಾವೇ ಆ ಸಾಲಕ್ಕೆ ಇಎಂಐ ಕಟ್ಟುತ್ತೇವೆ. ಜತೆಗೆ, ಲಾಭಾಂಶ ನೀಡುತ್ತೇವೆ. ನಿಮ್ಮ ತಿಂಗಳ ವೇತನ ನಿಮಗೆ ಉಳಿಯಲಿದೆ ಎಂದು ನಂಬಿಸುತ್ತಿದ್ದರು. ಇವರ ಮಾತುಗಳಿಗೆ ಮರುಳಾಗಿ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಕೆಲವು ಟೆಕ್ಕಿಗಳು ಮುಂದಾಗುತ್ತಿದ್ದರು. ಈ ವೇಳೆ ಮಂಜುನಾಥ, ತಾನೇ ಸಾಲ ಕೊಡಿಸುವ ಪ್ರಕ್ರಿಯೆ ನಡೆಸಿಕೊಡುತ್ತಿದ್ದ. ಒಬ್ಬ ಟೆಕ್ಕಿ ವೇತನ ಆಧಾರದಲ್ಲಿ ಆತನಿಗೆ ತಿಳಿಯದಂತೆ ಐದಾರು ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಐದಾರು ಬ್ಯಾಂಕ್‌ಗಳಲ್ಲಿಯೂ ಮೂರರಿಂದ ನಾಲ್ಕು ದಿನಗಳಿಗೆ ಸಾಲ ಮಂಜೂರು ಮಾಡಿಸಿಕೊಂಡು ಸಾಲ ಮುಂಜೂರಿನ ಡಿಡಿಯನ್ನು ಪಡೆದು. ಅದನ್ನು ಸ್ಟೀಫನ್ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಟೆಕ್ಕಿಗಳಿಗೆ ಗೊತ್ತಿರಲಿಲ್ಲ.
ಇದನ್ನೂ ಓದಿ:‘ಕೃಷ್ಣ ಟಾಕೀಸ್’ ನಲ್ಲಿ ಅಜೇಯ್ ರಾವ್ ಜೊತೆ ನಾಯಕಿ ಅಪೂರ್ವ
ಆರೋಪಿಗಳು ಲಾಭಾಂಶವನ್ನು ನೀಡುತ್ತಿರಲಿಲ್ಲ. ಜತೆಗೆ, ಸಾಲ ನೀಡಿದ್ದ ಬ್ಯಾಂಕ್‌ಗಳು ಟೆಕ್ಕಿಗಳಿಗೆ ನೋಟಿಸ್ ನೀಡಲು ಆರಂಭವಾಯಿತು ಆಗ ಎಚ್ಚೆತ್ತುಕೊಂಡವರು. ಸ್ಟೀಫನ್‌ನನ್ನು ಪ್ರಶ್ನಿಸಿದಾಗ ಅವರು ನಾನಾ ಸಬೂಬು ಹೇಳಿದ್ದಾರೆ. ಕಡೆಗೆ ಹಣ ಕಳೆದುಕೊಂಡಿದ್ದ ಡಿ.ಪಿ.ಸತೀಶ್ ಎಂಬುವವರು ಚಂದ್ರಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆ ಆಗಿದ್ದರಿಂದ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.