ಮುಂಬೈ:ಜಾಗತಿಕ ಷೇರುಪೇಟೆ ಬೆಳವಣಿಗೆಗಳು ಮುಂಬೈ ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದು, ಗುರುವಾರ(ಜನವರಿ 07, 2021) ಹೂಡಿಕೆದಾರರು ಆರಂಭಿಕ ವಹಿವಾಟಿನಲ್ಲಿ ಷೇರು ಖರೀದಿಗೆ ಉತ್ಸಾಹ ತೋರಿದ್ದು, ಸೆನ್ಸೆಕ್ಸ್ ಸೂಚ್ಯಂಕ 270 ಅಂಕ ಏರಿಕೆ ಕಂಡಿದೆ.
ಹೂಡಿಕೆದಾರರ ಖರೀದಿಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಗಳ ಷೇರು ಮಾರಾಟದಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ತಿಳಿಸಿದೆ.
ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್ ಇ) 270.69 ಅಂಕಗಳಷ್ಟು ಏರಿಕೆ ಕಂಡಿದ್ದು, 48,444.75 ಅಂಕಗಳಷ್ಟು ವಹಿವಾಟು ನಡೆಸಿದೆ. ನಿಫ್ಟಿ ಸೂಚ್ಯಂಕ 80.95 ಅಂಕಗಳಷ್ಟು ಏರಿಕೆಯಾಗಿದ್ದು, 14,227.20 ಅಂಕಗಳ ವಹಿವಾಟು ದಾಖಲಿಸಿದೆ.
ಷೇರುಪೇಟೆ ಚೇತರಿಕೆಯಿಂದ ಪವರ್ ಗ್ರಿಡ್ ಶೇ.2ರಷ್ಟು ಲಾಭ ಗಳಿಸಿದೆ. ಇನ್ನುಳಿದಂತೆ ಎಸ್ ಬಿಐ, ಇಂಡಸ್ ಲ್ಯಾಂಡ್ ಬ್ಯಾಂಕ್, ಎಲ್ ಆ್ಯಂಡ್ ಟಿ, ಆ್ಯಕ್ಸಿಸ್ ಬ್ಯಾಂಕ್, ಒಎನ್ ಜಿಸಿ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಲಾಭ ಗಳಿಸಿರುವುದಾಗಿ ವರದಿ ತಿಳಿಸಿದೆ.
10 ದಿನಗಳ ಷೇರುಪೇಟೆಯ ನಾಗಾಲೋಟಕ್ಕೆ ಬುಧವಾರ ಬ್ರೇಕ್ ಬಿದ್ದಿದೆ. ಜಾಗತಿಕ ಬೆಳವಣಿಗೆಗಳು ಮುಂಬೈ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ರಿಲಯನ್ಸ್ ಇಂಡಸ್ಟ್ರೀಸ್, ಐಟಿ, ಹಣಕಾಸು, ಎಫ್ಎಂಸಿಜಿ ಷೇರುಗಳ ಮಾರಾಟದಲ್ಲಿ ತೊಡಗಿದ ಕಾರಣ ಬಿಎಸ್‌ಇ ಸೆನ್ಸೆಕ್ಸ್ 263.72 ಅಂಕಗಳ ಕುಸಿತ ದಾಖಲಿಸಿ, 48,174ರಲ್ಲಿ ವಹಿವಾಟು ಅಂತ್ಯಗೊಳಿಸಿತ್ತು.
ಇದನ್ನೂ ಓದಿ:ಅಮೆರಿಕ ಕ್ಯಾಪಿಟಲ್ ಕಟ್ಟಡದಲ್ಲಿ ಹಿಂಸಾಚಾರ; ಟ್ರಂಪ್ ಫೇಸ್ ಬುಕ್, ಟ್ವಿಟರ್ ಖಾತೆ ಸ್ಥಗಿತ
ಮಧ್ಯಂತರ ವಹಿವಾಟಿನ ಒಂದು ಹಂತದಲ್ಲಿ ಇದು 48,616.66ಕ್ಕೆ ತಲುಪಿತ್ತು. ಇದೇ ವೇಳೆ, ನಿμr 53.25 ಅಂಕಗಳಷ್ಟು ಕುಸಿದು, 14,146ರಲ್ಲಿ ಕೊನೆಗೊಂಡಿತ್ತು. ಐಟಿಸಿ ಷೇರುಗಳು ಶೇ. 2.86ರಷ್ಟು ಭಾರೀ ನಷ್ಟ ಅನುಭವಿಸಿದರೆ, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಎಚ್‌ಸಿಎಲ್ ಟೆಕ್ ಮತ್ತು ಎಚ್‌ಯುಎಲ್ ಷೇರುಗಳೂ ಕುಸಿತ ಕಂಡವು. ಇನ್ನೊಂದೆಡೆ, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್, ಒಎನ್‌ಜಿಸಿ, ಅಲ್ಟ್ರಾ ಟೆಕ್ ಸಿಮೆಂಟ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭ ಗಳಿಸಿದ್ದವು.