ಮುಂಬಯಿ: ಏಷಿಯನ್ ಮಾರುಕಟ್ಟೆಯಲ್ಲಿನ ಮಿಶ್ರ ಪ್ರತಿಕ್ರಿಯೆಯ ವಹಿವಾಟಿನ ಪರಿಣಾಮ ಬುಧವಾರ (ಜೂನ್ 01) ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 225 ಅಂಕಗಳಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ:ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆ; ಜೂನ್ 1ರಿಂದಲೇ ಅನ್ವಯ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 225.08 ಅಂಕಗಳಷ್ಟು ಏರಿಕೆಯಾಗಿದ್ದು, 55,791.49 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 64.65 ಅಂಕ ಏರಿಕೆಯಾಗಿದ್ದು, 16,649.20 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಸೆನ್ಸೆಕ್ಸ್ ಏರಿಕೆಯಿಂದ ಏಷಿಯನ್ ಪೇಂಟ್ಸ್, ಎನ್ ಟಿಪಿಸಿ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್, ಐಟಿಸಿ, ಟೆಕ್ ಮಹೀಂದ್ರ, ಟೈಟಾನ್, ಮಾರುತಿ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರು ಲಾಭ ಗಳಿಸಿದೆ.
ಮತ್ತೊಂದೆಡೆ ಡಾ.ರೆಡ್ಡೀಸ್. ಸನ್ ಫಾರ್ಮಾ. ಪವರ್ ಗ್ರಿಡ್, ವಿಪ್ರೋ ಮತ್ತು ಆಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಕುಸಿತ ಕಂಡಿದೆ. ಮಂಗಳವಾರ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 359.33 ಅಂಕಗಳಷ್ಟು ಕುಸಿತದೊಂದಿಗೆ 55,566.41 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 76.85 ಅಂಕ ಇಳಿಕೆಯಾಗಿದ್ದು, 16,584.55 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.