ಮುಂಬೈ: ವಿದೇಶಿ ಬಂಡವಾಳದ ಹೊರಹರಿವು ಮುಂದುವರಿದಿರುವ ನಡುವೆ ಬುಧವಾರ (ಮೇ ೩೧) ಬಾಂಬೆ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ವಹಿವಾಟು 360 ಅಂಕಗಳ ಕುಸಿತದೊಂದಿಗೆ ಆರಂಭಗೊಂಡಿದೆ.
ಇದನ್ನೂ ಓದಿ:Crime News: ಕೌಟುಂಬಿಕ ಕಲಹ; 25 ಬಾರಿ ಚಾಕುವಿನಿಂದ ಚುಚ್ಚಿ ಮಗಳನ್ನೇ ಕೊಂದ ತಂದೆ
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 361.17 ಅಂಕಗಳಷ್ಟು ಇಳಿಕೆ ಕಂಡಿದ್ದು, 62,608.70 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 92.12 ಅಂಕ ಇಳಿಕೆಯಾಗಿದ್ದು, 18,541.65 ಅಂಕಗಳ ಮಟ್ಟ ತಲುಪಿದೆ.
ಇಂದಿನ ಷೇರುಪೇಟೆ ವಹಿವಾಟಿನಲ್ಲಿ ಎಚ್ ಡಿಎಫ್ ಸಿ ಲೈಫ್, ಟಾಟಾ ಮೋಟಾರ್ಸ್, ಏಷಿಯನ್ ಪೇಂಟ್ಸ್, ಬಿಪಿಸಿಎಲ್, ಸನ್ ಫಾರ್ಮಾ, ಎಚ್ ಸಿಎಲ್ ಟೆಕ್, ಎಸ್ ಬಿಐ ಲೈಫ್, ಬ್ರಿಟಾನಿಯಾ ಷೇರುಗಳು ಲಾಭಗಳಿಸಿದೆ.
Related Articles
ಮತ್ತೊಂದೆಡೆ ಒಎನ್ ಜಿಸಿ, ಎನ್ ಟಿಪಿಸಿ, ಎಚ್ ಡಿಎಫ್ ಸಿ, ಕೋಲ್ ಇಂಡಿಯಾ, ರಿಲಯನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಜೆಎಸ್ ಡಬ್ಲ್ಯು ಸ್ಟೀಲ್, ಐಟಿಸಿ, ಮಹೀಂದ್ರ & ಮಹೀಂದ್ರ, ಐಸಿಐಸಿಐ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್ ಷೇರುಗಳ ಮೌಲ್ಯ ಕುಸಿತ ಕಂಡಿದೆ.