ನವದೆಹಲಿ: ಏಷಿಯನ್ ಮಾರುಕಟ್ಟೆಯಲ್ಲಿನ ನೀರಸ ವಹಿವಾಟು ಮತ್ತು ವಿದೇಶಿ ಬಂಡವಾಳದ ನಿರಂತರ ಹೊರಹರಿವಿನ ಪರಿಣಾಮ ಸೋಮವಾರ (ಮಾರ್ಚ್ 28) ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 130ಕ್ಕೂ ಅಧಿಕ ಅಂಕ ಇಳಿಕೆಯಾಗಿದೆ.
ಇದನ್ನೂ ಓದಿ:ಉಡುಪಿ: ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ, ವಿದ್ಯಾರ್ಥಿಗಳಿಗೆ ಶುಭ ಹಾರೈಕೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 138.56 ಅಂಕಗಳಷ್ಟು ಕುಸಿತವಾಗಿದ್ದು, 57,223.64 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 43.55 ಅಂಕ ಇಳಿಕೆಯಾಗಿದ್ದು, 17,109.45 ಅಂಕ ತಲುಪಿದೆ.
ಸೆನ್ಸೆಕ್ಸ್ ಇಳಿಕೆಯ ಪರಿಣಾಮ ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಡಾ.ರೆಡ್ಡೀಸ್ ಲ್ಯಾಬೋರೇಟರೀಸ್, ಬಜಾಜ್ ಫಿನ್ ಸರ್ವ್, ನೆಸ್ಲೆ ಇಂಡಿಯಾ, ಏಷಿಯನ್ ಪೇಂಟ್ಸ್, ಎಚ್ ಸಿಎಲ್ ಟೆಕ್ನಾಲಜೀಸ್, ಟಿಸಿಎಸ್ ಮತ್ತು ಟೆಕ್ ಮಹೀಂದ್ರ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಮಾರುತಿ ಸುಜುಕಿ ಇಂಡಿಯಾ, ಐಟಿಸಿ, ಭಾರ್ತಿ ಏರ್ ಟೆಲ್ ಮತ್ತು ಸನ್ ಫಾರ್ಮಾ, ಬಜಾಜ್ ಆಟೋ ಲಿಮಿಟೆಡ್, ಲುಪಿನ್ ಇಂಡಿಯಾ, ಕೋಲ್ ಇಂಡಿಯಾ, ಆಲ್ ಇಂಡಿಯಾ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್, ಸಿಪ್ಲಾ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿದೆ.