Advertisement

ಫಿಫಾ ವಿಶ್ವಕಪ್‌ ನಕಲಿ ಟ್ರೋಫಿಯಲ್ಲಿ ಉದ್ದೀಪನ ಸಾಗಣೆ!

06:00 AM Jun 28, 2018 | |

ಬ್ಯೂನಸ್‌ ಐರೆಸ್‌ (ಆರ್ಜೆಂಟೀನಾ): ಐರೋಪ್ಯ ರಾಷ್ಟ್ರಗಳಲ್ಲಿ ಫ‌ುಟ್‌ಬಾಲ್‌ ವಿಶ್ವಕಪ್‌ ಜ್ವರ ಹೆಚ್ಚುತ್ತಿದ್ದಂತೆಯೇ ಟೂರ್ನಿಯ ಹೆಸರಿನಲ್ಲಿ ಕಳ್ಳ ಸಾಗಾಣಿಕೆ ಜಾಲವೂ ವ್ಯಾಪಕವಾಗಿದೆ. ಇಂತಹ ಮಹತ್ವದ ಕೂಟಗಳಿದ್ದಾಗ ವಿಶ್ವ ಕಪ್‌ ಜೆರ್ಸಿಗಳು, ಟೀ ಶರ್ಟ್‌ಗಳು, ವಿಶ್ವಕಪ್‌ ಪಾರಿತೋಷ ಕದನಕಲಿ ಮಾಡೆಲ್‌ಗಳ ಮಾರಾಟ ವಿಶ್ವದಾದ್ಯಂತ ಜೋರಾಗಿರುತ್ತದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮಾದಕ ದ್ರವ್ಯಗಳ ಸಾಗಾಣಿಕೆಗೆ ದಂಧೆಕೋರರು ಮುಂದಾಗುತ್ತಾರೆ. 
ಫಿಫಾ ವಿಶ್ವಕಪ್‌ನ ನಕಲಿ ಪಾರಿತೋಷಕಗಳಲ್ಲಿ ಡ್ರಗ್ಸ್‌ ತುಂಬಿ ಮಾರಾಟ ಮಾಡಲಾರಂಭಿಸಿದ್ದ ಜಾಲವೊಂದನ್ನು ಆರ್ಜೆಂಟೀನಾದ ಪೊಲೀಸರು ಬಯಲುಗೊಳಿಸಿದ್ದಾರೆ. 

Advertisement

ಆರ್ಜೆಂಟೀನಾದ ಭದ್ರತಾ ಸಚಿವ ಕ್ರಿಸ್ಟಿಯನ್‌ ರಿಟೊಂಡೊ ಈ ವಿಷಯ ಪ್ರಕಟಿಸಿದ್ದು, ಈ ಕಳ್ಳಸಾಗಾಣಿಕೆದಾರರ ತಂಡದ ಇಬ್ಬರು ಮಹಿಳೆಯರು, ನಾಲ್ವರು ಪುರುಷರನ್ನು ಬಂಧಿಸಿದ್ದಾರೆ. ಅವರಲ್ಲಿದ್ದ ಕೆಲವು ಪಾರಿತೋಷಕಗಳಲ್ಲಿ ಅಡಗಿಸಿಟ್ಟಿದ್ದ ಸುಮಾರು 20 ಕೆಜಿ ಗಾಂಜಾ, 1,800 ಕೊಕೇನ್‌ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಸುಮಾರು 10 ಲಕ್ಷ ರೂ.ಗಳಷ್ಟಿದೆ. 

ಮದ್ಯ ಸಾಗಣೆ: ಕಳ್ಳ ಸಾಗಾಣಿಕೆದಾರರ ಕತೆ ಒಂದೆಡೆಯಾದರೆ, ಕ್ರೀಡಾಂಗಣಗಳಲ್ಲಿ ಶಿಸ್ತು ಉಲ್ಲಂಘನೆ ಮಾಡುವ ಪ್ರೇಕ್ಷಕರು ಕ್ರೀಡಾ ಕೂಟದ ಆಯೋಜಕರಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಪಂದ್ಯ ನೋಡಲು ಕ್ರೀಡಾಂಗಣ ಳಿಗೆ ತಮ್ಮೊಂದಿಗೆ ಕೊಂಡೊಯ್ಯುವ ಬೈನಾ ಕ್ಯುಲರ್‌ಗಳಲ್ಲಿ ಪುಟ್ಟ ಪುಟ್ಟ ಮದ್ಯದ ಪ್ಯಾಕೆಟುಗಳನ್ನು ಇಟ್ಟು ಕೊಂಡು ಹೋಗುತ್ತಿದ್ದ ಕೆಲ ಪ್ರೇಕ್ಷಕರನ್ನು ಕೊಲಂಬಿಯ ಪೊಲೀಸರು ಬಂಧಿಸಿದ್ದಾರೆಂದು ಬಿಬಿಸಿ ವರದಿ ಮಾಡಿದೆ.

ಕೊಕೇನ್‌ನಿಂದಲೇ ಜೆರ್ಸಿ ತಯಾರಿ!
ಬ್ಯೂನಸ್‌ ಐರೆಸ್‌ನಲ್ಲಿ ಸಿಕ್ಕಿರುವ ಕಳ್ಳರು ನಕಲಿ ಪಾರಿತೋಷಕಗಳಲ್ಲಿ ಕಳ್ಳಸಾಗಣೆ ಮಾಡುವ ದಾರಿ ಹಿಡಿದಿದ್ದರೆ, ಕೊಲಂಬಿಯಾದ ಕಳ್ಳ ಸಾಗಣೆದಾರರು ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕ್ರಮ ಬದ್ಧ ರಾಸಾಯನಿಕ ವಿಧಾನಗಳಿಂದ ಕರಗಿಸಿದರೆ ಅವು ಕೊಕೇನ್‌ ಆಗಿ ಪರಿವರ್ತನೆಯಾಗುವಂಥ ಜೆರ್ಸಿಗಳನ್ನು ತಯಾರಿಸಿ ಅವುಗಳನ್ನು ತಲುಪಬೇಕಾದ ಕಡೆ ಕಳಿಸುತ್ತಿದ್ದ ಜಾಲ ವೊಂದನ್ನು ಕೊಲಂಬಿಯಾ ಪೊಲೀಸರು ಭೇದಿಸಿದ್ದಾರೆ. ಈ ತಂಡದಿಂದ 14 ವಿವಿಧ ರಾಷ್ಟ್ರೀಯ ಫ‌ುಟ್‌ಬಾಲ್‌ ತಂಡಗಳ ಜೆರ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು “ಗ್ಲೋಬಲ್‌ ನ್ಯೂಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next