Advertisement

ಸ್ಟಿಮಾಕ್‌ ಭಾರತದಫ‌ುಟ್ಬಾಲ್ ಕೋಚ್

02:47 AM May 10, 2019 | Team Udayavani |

ಹೊಸದಿಲ್ಲಿ: ಕ್ರೊವೇಶಿಯ ವಿಶ್ವಕಪ್‌ ಫ‌ುಟ್ಬಾಲ್ ತಂಡದ ಸದಸ್ಯ ಹಾಗೂ ತಂಡದ ಮ್ಯಾನೇಜರ್‌ ಕೂಡ ಆಗಿದ್ದ ಐಗರ್‌ ಸ್ಟಿಮಾಕ್‌ ಭಾರತ ಫ‌ುಟ್ಬಾಲ್ ತಂಡದ ನೂತನ ಕೋಚ್ ಆಗುವುದು ಖಚಿತಗೊಂಡಿದೆ. ಎಐಎಫ್ಎಫ್ ತಾಂತ್ರಿಕ ಸಮಿತಿ ಗುರುವಾರ ಸ್ಟಿಮಾಕ್‌ ಹೆಸರನ್ನು ಶಿಫಾರಸು ಮಾಡಿದೆ.

Advertisement

51ರ ಹರೆಯದ ಐಗರ್‌ ಸ್ಟಿಮಾಕ್‌ 1998ರ ಕ್ರೊವೇಶಿಯದ ವಿಶ್ವಕಪ್‌ ತಂಡದ ಸದಸ್ಯರಾಗಿದ್ದರು. ಅಂದು ಕ್ರೊವೇಶಿಯ ತೃತೀಯ ಸ್ಥಾನಿಯಾಗಿತ್ತು.

‘ನಾವು ಕೋಚ್ ಹುದ್ದೆಗೆ 4 ಮಂದಿ ಅಭ್ಯರ್ಥಿಗಳ ಸಂದ ರ್ಶನ ಮಾಡಿದ್ದೇವೆ. ಇವರಲ್ಲಿ ಐಗರ್‌ ಸ್ಟಿಮಾಕ್‌ ಸೂಕ್ತ ಅಭ್ಯರ್ಥಿ ಎನಿಸಿತು. ಇವರ ಹೆಸರನ್ನು ಸೂಚಿಸಿದ್ದೇವೆ’ ಎಂದು ತಾಂತ್ರಿಕ ಸಮಿತಿಯ ಚೇರ್ಮನ್‌ ಶ್ಯಾಮ್‌ ಥಾಪ ಹೇಳಿದರು.

ಶುಕ್ರವಾರ ಐಗರ್‌ ಸ್ಟಿಮಾಕ್‌ ಅವರ ಹೆಸರನ್ನು ಅಧಿಕೃ ತವಾಗಿ ಘೋಷಿಸುವ ಸಾಧ್ಯತೆ ಇದ್ದು, ಇದು 3 ವರ್ಷಗಳ ಒಪ್ಪಂದವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next