Advertisement

ಇನ್ನೂ ನಿಂತಿಲ್ಲ ಅತೃಪ್ತ ಆಕಾಂಕ್ಷಿಗಳ ಆಕ್ರೋಶ

07:00 AM Apr 11, 2018 | Team Udayavani |

ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚಿತರ ಆಕ್ರೋಶ ಇನ್ನೂ ಶಮನವಾಗದೇ ಇರುವುದು ಹಾಗೂ ಅಸಮಾಧಾನಿತರು ಜೆಡಿಎಸ್‌
ಸಂಪರ್ಕದಲ್ಲಿರುವುದು ಪಕ್ಷದ ನಾಯಕರ ತಲೆಬಿಸಿ ಹೆಚ್ಚಿಸಿದೆ. ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆಯಾಗದ ಆಕಾಂಕ್ಷಿಗಳು ಈಗ
ನಾಯಕರ ಬೆನ್ನೇರಿದ್ದಾರೆ. ಒತ್ತಡ ಹಾಕಿ ಟಿಕೆಟ್‌ ಪಕ್ಕಾ ಮಾಡುವಂತೆ ಪಟ್ಟು ಹಿಡಿದಿದ್ದಾರೆ.

Advertisement

ಇವೆಲ್ಲದರ ನಡುವೆ ಮೊಳಕಾಲ್ಮೂರು ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆ ಆಗಿದ್ದರೂ ಸಂಸದ ಶ್ರೀರಾಮುಲು 2 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ
ಬಯಕೆಯನ್ನು ಪಕ್ಷದ ನಾಯಕರ ಬಳಿ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಗ್ರಾಮಾಂತರ ಹಾಗೂ ಮೈಸೂರಿನ ಎಚ್‌.ಡಿ.ಕೋಟೆ ಕ್ಷೇತ್ರದಿಂದ ಟಿಕೆಟ್‌ ಕೊಡುವಂತೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಯಾಗದ ಹಿನ್ನೆಲೆಯಲ್ಲಿ
ಆತಂಕಗೊಂಡಿರುವ ವಿರಾಜ ಪೇಟೆ ಶಾಸಕ ಕೆ.ಜಿ.ಬೋಪಯ್ಯ ಮಂಗಳವಾರ ಪಕ್ಷದ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದರು.

ಕೇಂದ್ರ ಸಚಿವ ಅನಂತಕುಮಾರ್‌, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌, ಉಸ್ತುವಾರಿ ಮುರಳೀದರ್‌ರಾವ್‌, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿರುವ ಬೋಪಯ್ಯ, ಟಿಕೆಟ್‌ ತಮಗೇ ನೀಡುವಂತೆ ಮನವಿ ಮಾಡಿದರು.

ಶ್ರೀರಾಮುಲು ಬೇಡಿಕೆ 
ತಾವು ಕಟ್ಟಿದ್ದ ಬಿಎಸ್‌ಆರ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಹಾಲಿ ಶಾಸಕ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನಿರಾಕರಿಸಿರುವ ಬಗ್ಗೆ ಅವರ
ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿ ಸಿದ್ದು, ಆಲ್ಲಿ ವಿರೋಧದ ನಡುವೆ ಸ್ಪರ್ಧೆ ಮಾಡುವುದು ಬೇಡ. ಹೀಗಾಗಿ, ಬಳ್ಳಾರಿ
ಗ್ರಾಮಾಂತರ ಮತ್ತು ಎಚ್‌.ಡಿ.ಕೋಟೆ ಕ್ಷೇತ್ರದಿಂದ ಟಿಕೆಟ್‌ ಕೊಡಿ ಎಂದು ಶ್ರೀರಾಮುಲು ಕೇಳಿದ್ದಾರೆ. ಎಚ್‌.ಡಿ.ಕೋಟೆ ಸಿಎಂ
ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಸ್ಪರ್ಧೆ ಮಾಡುವುದರಿಂದ ಆ ಭಾಗದಲ್ಲಿ ನಾಯಕ ಸಮುದಾಯದ ಮತ ಸೆಳೆಯಬಹುದು ಎಂಬ ಲೆಕ್ಕಾಚಾರ ಸಹ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಪಕ್ಷದ ನಾಯಕರು ತಕ್ಷಣಕ್ಕೆ ಇದಕ್ಕೆ ಯಾವುದೇ ಸ್ಪಂದನೆ ನೀಡಿಲ್ಲ ಎಂದು ತಿಳಿದು ಬಂದಿದೆ.

ಚಿಕ್ಕಪೇಟೆ ಕ್ಷೇತ್ರದ ಟಿಕೆಟ್‌ ಎರಡು ಕೋಟಿ ರೂ.ಗೆ ಮಾರಾಟ ವಾಗಿದೆ ಎಂಬುದು ಸುಳ್ಳು. ಬಿಜೆಪಿಯಲ್ಲಿ ಅಂತಹ ಪದಟಛಿತಿಯೇ ಇಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದಾಗ ಅಸಮಾಧಾನ ಸಹಜ.
● ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next