Advertisement

ಮತದಾನ ಹೆಚ್ಚಳಕ್ಕೆ 30 ಸಾವಿರ ಮನೆಗಳಿಗೆ ಸ್ಟಿಕ್ಕರ್‌

01:07 PM Mar 29, 2019 | Team Udayavani |

ಹುಣಸೂರು: ತಾಲೂಕು ಸ್ವೀಪ್‌ ಸಮಿತಿ ವತಿಯಿಂದ ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾಗಿರುವ ಗ್ರಾಮ, ಗಿರಿಜನ ಹಾಡಿಗಳಲ್ಲಿ ಹಾಗೂ ನಗರದ ವಿವಿಧ ವಾರ್ಡ್‌ಗಳಲ್ಲಿ ಅಭಿಯಾನದ ಮೂಲಕ 30 ಸಾವಿರ ಮನೆಗಳಿಗೆ ಮತದಾನ ಕುರಿತು ಜಾಗೃತಿ ಮೂಡಿಸುವ ಸ್ಟಿಕ್ಕರ್‌ ಅಂಟಿಸಿಲಾಗುತ್ತಿದೆ ಎಂದು ತಾಲೂಕು ಸ್ವೀಪ್‌ ಸಮಿತಿ ನೋಡೆಲ್‌ ಅಧಿಕಾರಿ ಕೃಷ್ಣಕುಮಾರ್‌ ತಿಳಿಸಿದರು.

Advertisement

ಮನೆ ಮನೆ ಭೇಟಿ: ಅತಿ ಕಡಿಮೆ ಮತದಾನವಾಗಿದ್ದ ಹುಣಸೂರು ನಗರದ 16 ವಾರ್ಡ್‌ಗಳು, ತಾಲೂಕಿನ ಗಿರಿಜನ ಹಾಡಿಗಳು, ಹಲವು ಹಳ್ಳಿಗಳು, ನಗರ ಪ್ರದೇಶ ಹಾಗೂ ಗ್ರಾಪಂ ಕೇಂದ್ರಗಳಲ್ಲಿ ಅಧಿಕಾರಿಗಳು, ಹಳ್ಳಿಗಳಲ್ಲಿ ಹಾಗೂ ಹಾಡಿಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸ್ಟಿಕ್ಕರ್‌ ಅಂಟಿಸುವ ಹಾಗೂ ಮತದಾನದ ಪಾವಿತ್ರತೆಯನ್ನು ಸಾರುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಮತದಾನದಲ್ಲಿ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಸಂತೆ, ಜಾತ್ರೆಯಲ್ಲೂ ಅಭಿಯಾನ: ತಾಲೂಕಿನ 14 ಸೆಕ್ಟರ್‌ ಮ್ಯಾಜಿಸ್ಟ್ರೇಟರ್‌ಗಳು ಅಲ್ಲಲ್ಲಿ ನಡೆಯುವ ಸಂತೆ, ಜಾತ್ರೆ ಮತ್ತಿತರೆಡೆ ಹಾಗೂ ಹೋಬಳಿ ಕೇಂದ್ರ ಮತ್ತು ಜನದಟ್ಟಣೆ ಇರುವ ಪ್ರದೇಶಗಳಲ್ಲೂ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳಲ್ಲಿ ಪ್ರಾತ್ಯಕ್ಷತೆ ನಡೆಸುವ ಹಾಗೂ ಸಾರ್ವಜನಿಕರಿಂದ ಮತದಾನ ಮಾಡಿಸುವ ಮತ್ತು ಮತವನ್ನು ಯಾರಿಗೆ ಹಾಕಿದ್ದಾರೆಂದು ವಿವಿ ಪ್ಯಾಟ್‌ ಮೂಲಕ ಖಾತ್ರಿಪಡಿಸಿಕೊಳ್ಳವ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಕಾರ್ಯಕ್ರಮಗಳ ಮೂಲಕ ಪ್ರತಿ ಮತದಾರರಿಗೆ ತಲುಪಿಸುವ, ಜಾಗೃತಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next