Advertisement

ನಿಷೇಧ ಅಂತ್ಯ: ಸ್ಟೀವ್ ಸ್ಮಿತ್ ಮತ್ತೆ ಆಸ್ಟ್ರೇಲಿಯಾ ನಾಯಕರಾಗಬಹುದು

10:16 AM Mar 31, 2020 | keerthan |

ಸಿಡ್ನಿ; ಆಸ್ಟ್ರೇಲಿಯದ ಖ್ಯಾತ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ ನಾಯಕತ್ವ ನಿಷೇಧ ಅವಧಿ ಭಾನುವಾರಕ್ಕೆ ಅಂತ್ಯವಾಗಿದೆ. 2018ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ವೇಳೆ ಸ್ಟೀವ್‌ ಸ್ಮಿತ್‌ ಚೆಂಡು ವಿರೂಪ ಮಾಡಿದ್ದರು.

Advertisement

ಪರಿಣಾಮ 1 ವರ್ಷ ಕ್ರಿಕೆಟ್‌ನಿಂದಲೇ ನಿಷೇಧಕ್ಕೆ ಒಳಗಾಗಿದ್ದರು. 2 ವರ್ಷ ತಂಡದ ನಾಯಕನಾಗುವ ಅರ್ಹತೆಯನ್ನೂ ಕಳೆದು ಕೊಂಡಿದ್ದರು. ಇದೀಗ ಮಾ.29ರಂದು ಅವರ ಮೇಲಿನ ಎಲ್ಲ ರೀತಿಯ ನಿಷೇಧಗಳು ಮುಗಿದಿವೆ.

ಒಂದುವೇಳೆ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಬಯಸಿದರೆ, ಸ್ಮಿತ್‌ ಮತ್ತೆ ನಾಯಕರಾಗಲು ಇನ್ನು ಸಾಧ್ಯವಿದೆ. ಸದ್ಯ ಟೆಸ್ಟ್ ಕ್ರಿಕೆಟ್ ಗೆ ಟಿಮ್ ಪೇನ್ ನಾಯಕನಾಗಿದ್ದರೆ, ನಿಗದಿತ ಓವರ್ ಕ್ರಿಕೆಟ್ ಗೆ ಆರೋನ್ ಫಿಂಚ್ ನಾಯಕತ್ವ ವಹಿಸಿದ್ದಾರೆ. ಇವರಿಬ್ಬರ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಸದ್ಯಕ್ಕೆ ನಾಯಕತ್ವ ಸ್ಮಿತ್ ಪಾಲಿಗೆ ಒದಗುವುದುಕಷ್ಟ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next