Advertisement

ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ 

05:29 PM Mar 29, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ಪಶು ಸಂಗೋಪನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಧರ್ಮಸ್ಥಳ ಗ್ರಾಮ ಪಂಚಾಯತ್‌ ಸಹಯೋಗದಲ್ಲಿ ಬೀದಿನಾಯಿಗಳ ಮತ್ತು ಸಾಕು ನಾಯಿಗಳ ಉಚಿತ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸಾ ಶಿಬಿರ ಧರ್ಮಸ್ಥಳ ಗ್ರಾ.ಪಂ. ಆವರಣದಲ್ಲಿ ನಡೆಯಿತು.

Advertisement

ಮೈಸೂರು ಪಶುಸಂಗೋಪನ ಇಲಾಖೆ ಜಂಟಿ ನಿರ್ದೇಶಕ ಡಾ| ದೇವದಾಸ್‌ ಉದ್ಘಾಟಿಸಿದರು. 60ಕ್ಕೂ ಹೆಚ್ಚು ಬೀದಿನಾಯಿಗಳು, 40ಕ್ಕೂ ಹೆಚ್ಚು ಸಾಕು ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬೀದಿನಾಯಿಗಳಿಗೆ ಒಂದು ವಾರಗಳ ಆರೈಕೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ದಿ ಹ್ಯಾಂಡ್‌ ಟು ಸರ್ವ್‌ ಟ್ರಸ್ಟ್‌, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘ, ಮೋನಿಶ್‌ ಕುಮಾರ್‌, ತೃಪ್ತಿ ಹೊಟೇಲ್‌, ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ, ಸೇವಾ ಭಾರತಿ ಕನ್ಯಾಡಿ- 2, ಧರ್ಮಶ್ರೀ ಮೆಡಿಕಲ್ಸ್‌, ಬೆಳ್ತಂಗಡಿ ಯುವ ಜೈನ್‌ ಮಿಲನ್‌, ಬೆಂಗಳೂರು ಡೇರಿ ಡೇ ಮೊದಲಾದ ಸಂಘ-ಸಂಸ್ಥೆಗಳು ಸಹಕರಿಸಿದ್ದವು. ತಾ| ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಧಮಸ್ಥಳ ಪಶುವೈದ್ಯ ಆಸ್ಪತ್ರೆ ಜಾನುವಾರು ಅಧಿಕಾರಿ ಕೆ. ಜಯಕೀರ್ತಿ ಜೈನ್‌, ತಜ್ಞವೈದ್ಯರಾದ ಡಾ| ಟಿ.ಎಚ್‌. ಶಂಕರಪ್ಪ, ಡಾ| ವೇಣುಗೋಪಾಲ ವೇಣೂರು, ಡಾ| ಯತೀಶ್‌ ಕುಮಾರ್‌ ನೆರಿಯ, ಡಾ| ವಿನಯ ಮಡಂತ್ಯಾರು, ಡಾ| ಯಶವಂತ ಮೈಸೂರು, ಡಾ| ಅಶೋಕ್‌ ಕುಮಾರ್‌ ಮಂಗಳೂರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next