Advertisement

ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ: ಗಂಗಾವತಿ ಭಾಗದ ರೈತರ ಹೊಸ ಪ್ರಯೋಗ

01:16 PM Feb 16, 2021 | Team Udayavani |

ಗಂಗಾವತಿ: ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ರೈತರು ಅಳವಡಿಸಿಕೊಳ್ಳುತ್ತಿದ್ದು ಕೂಲಿಕಾರರ ಕೊರತೆಯಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಭತ್ತದ ಗದ್ದೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆಯ ಮೂಲಕ ಶೇ.50 ರಷ್ಟು ಖರ್ಚು ಉಳಿತಾಯ ಮಾಡಲಾಗುತ್ತಿದೆ.

Advertisement

ಒಂದು ಎಕರೆ ಭತ್ತದ ಗದ್ದೆಗೆ ಕ್ರಿಮಿನಾಶಕ ಸಿಂಪರಣೆಗೆ ನಾಲ್ಕು ಕೂಲಿ ಕಾರ್ಮಿಕರು ಬೇಕಾಗುತ್ತದೆ. ಸಹಜವಾಗಿ ಒಂದು ಲೀಟರ್ ಕ್ರಿಮಿನಾಶಕ ಒಂದು ಎಕರೆಗೆ ಸಿಂಪರಣೆ ಮಾಡಲಾಗುತ್ತದೆ.‌ ಆದರೆ ಡ್ರೋಣ್ ಮೂಲಕ ಒಂದು ಲೀಟರ್ ನಲ್ಲಿ ಎರಡು ಎಕರೆ ಸಿಂಪರಣೆ ಸಾಧ್ಯವಿದೆ‌. ಇದರಿಂದ ಹಣ, ಸಮಯ, ಮಾನವ ಸಂಪನ್ಮೂಲ ಉಳಿಸಲು ಸಾಧ್ಯವಿದೆ.

ಇದನ್ನೂ ಓದಿ:ಸೋತಲ್ಲೇ ಗೆದ್ದ ಟೀಂ ಇಂಡಿಯಾ: ಚೆಪಾಕ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ

ಈಗಾಗಲೇ ತಮಿಳುನಾಡು ಆಂಧ್ರ ಪ್ರದೇಶ ರಾಜ್ಯದ ರೈತರು ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದಾರೆ. ಡ್ರೋಣ್ ನಲ್ಲಿ 11 ಲೀಟರ್ ಕ್ರಿಮಿನಾಶಕ ಹಾಕಿ ಮೊದಲು ಜಿಪಿಎಸ್ ಮಾಡಿ ರಿಮೋಟ್ ಮೂಲಕ ಚಾಲನೆ ಮಾಡುತ್ತ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತದೆ. ಒಂದು ಎಕರೆಗೆ 600 ರೂ.ಬಾಡಿಗೆ ಇದ್ದು 7 ನಿಮಿಷಗಳಲ್ಲಿ ಒಂದು ಎಕರೆ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಹಣ ಮತ್ತು ಸಮಯ ಉಳಿತಾಯವಾಗುತ್ತದೆ.

Advertisement

ರೈತರಿಗೆ ಉಪಯುಕ್ತ: ಡ್ರೋಣ್ ಮೂಲಕ ಭತ್ತ ಸೇರಿ ವಿವಿಧ ಬೆಳೆಗಳಿಗೆ ಕ್ರಿಮಿನಾಶಕ ಸಿಂಪರಣೆ ವೆಚ್ಚದಾಯಕವಾಗಿದ್ದು ಬೇರೆ ರಾಜ್ಯಗಳಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ. ಈ ಬಾರಿ ಬಾಡಿಗೆ ಆಧಾರದಲ್ಲಿ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪರಣೆ ಮಾಡಲಾಗುತ್ತಿದೆ ಇದರಿಂದ ಕೂಲಿ ಆಳಿನ ಕೊರತೆಯಿಂದ ಬೇಸತ್ತ ರೈತರಿಗೆ ಹಣ ಸಮಯ‌ ಉಳಿತಾಯವಾಗುತ್ತಿದೆ ಎಂದು ರೈತ ಧನಂಜಯ ನಾಗಭೂಷಣ ಕಲ್ಗುಡಿ ‘ಉದಯವಾಣಿ’ ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next