Advertisement

Kannada cinema; ‘ಲವ್ ಲೀ’ ಮೇಲೆ ಸ್ಟೆಫಿ ನಿರೀಕ್ಷೆ

04:29 PM Mar 08, 2024 | Team Udayavani |

ನಟ ವಸಿಷ್ಠ ಸಿಂಹ ಶೀಘ್ರದಲ್ಲಿಯೇ “ಲವ್‌ ಲಿ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗುತ್ತಿದ್ದಾರೆ. ಸದ್ಯ “ಲವ್‌ ಲಿ’ ಸಿನಿಮಾದ ಚಿತ್ರೀಕರಣ ಮುಗಿದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಸಾಗುತ್ತಿದೆ. ಈ ಸಿನಿಮಾ ಮೂಲಕ ಸ್ಟೆಫಿ ಪಟೇಲ್‌ ಕನ್ನಡಕ್ಕೆ ಎಂಟ್ರಿಕೊಡುತ್ತಿದ್ದಾರೆ.

Advertisement

ಹೌದು, ವಸಿಷ್ಟ ಸಿಂಹಗೆ ನಾಯಕಿಯಾಗಿ ಜಾರ್ಖಂಡ್‌ ಮೂಲದ ಸ್ಟೆಫಿ ಪಟೇಲ್‌ ಜೋಡಿಯಾಗು ತ್ತಿದ್ದಾರೆ. ಹಿಂದಿ, ತಮಿಳು ಜೊತೆಗೆ ಕೊರಿಯನ್‌ ಭಾಷೆಯ ಸಿನಿಮಾ ಮತ್ತು ವೆಬ್‌ ಸಿರೀಸ್‌ಗಳಲ್ಲಿ ಅಭಿನಯಿಸಿದ ಅನುಭವಿರುವ ಸ್ಟೆಫಿ ಪಟೇಲ್‌ “ಲವ್‌ ಲಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟಿಯಾಗಿ ಪರಿಚಯವಾಗುತ್ತಿದ್ದಾರೆ.

ಇನ್ನು ಹೆಸರೇ ಹೇಳುವಂತೆ, “ಲವ್‌ ಲಿ’ ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಕಂ ರೌಡಿಸಂ ಕಥಾಹಂದರದ ಸಿನಿಮಾವಾಗಿದ್ದು, ಚೇತನ್‌ ಕೇಶವ್‌ ಈ ಸಿನಿಮಾಕ್ಕೆ ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಎಂ. ಆರ್‌ ರವೀಂದ್ರ ಕುಮಾರ್‌ ನಿರ್ಮಿಸುತ್ತಿರುವ “ಲವ್‌ ಲಿ’ ಸಿನಿಮಾಕ್ಕೆ ಕೆನಡಿ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next